ಕರ್ನಾಟಕ

karnataka

ETV Bharat / bharat

ಮೋದಿ ಬೆಂಬಲಿಗರನ್ನು ಸ್ಟುಪಿಡ್​ ಎಂದ ರಮ್ಯಾ: 'ಪದ್ಮಾವತಿ' ಪೋಸ್ಟ್​ಗೆ ಟ್ವಿಟ್ಟಿಗರ ಆಕ್ರೋಶ - ಟ್ವಿಟ್ಟರ್​ ಪೋಸ್ಟ್

ಪ್ರಧಾನಿ ಮೋದಿ ಬೆಂಬಲಿಗರನ್ನು ಸ್ಟುಪಿಡ್​ ಎಂಬ ಚಿತ್ರವೊಂದನ್ನು ರಮ್ಯಾ ಟ್ವಿಟ್ಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ

ಮೋದಿ ಬೆಂಬಲಿಗರನ್ನು ಸ್ಟುಪಿಡ್​ ಎಂಬ ಪೋಸ್ಟ್​ ಮಾಡಿದ ರಮ್ಯಾ

By

Published : Mar 14, 2019, 3:02 PM IST

ನವದೆಹಲಿ: ಕಾಂಗ್ರೆಸ್​ನ ಸೋಷಿಯಲ್​ ಮೀಡಿಯಾ ಹಾಗೂ ಕಮ್ಯುನಿಕೇಷನ್​ನ ಮುಖ್ಯಸ್ಥೆ ರಮ್ಯಾ ಅಲಿಯಾಸ್​ ದಿವ್ಯಸ್ಪಂದನ ಟ್ವಿಟ್ಟರ್​ನಲ್ಲಿ ಮಾಡಿದ ಪೋಸ್ಟ್​ವೊಂದು ಬಿಜೆಪಿಯ ಕಣ್ಣನ್ನು ಕೆಂಪಗಾಗಿಸಿದೆ.

ಪ್ರಧಾನಿ ಮೋದಿ ಭಾವಚಿತ್ರವಿರುವ ಪೋಸ್ಟ್​ನಲ್ಲಿ ' ನಿಮಗೆ ಗೊತ್ತೇ? 3 ಮಂದಿ ಮೋದಿ ಬೆಂಬಲಿಗರಲ್ಲಿ ಓರ್ವ, ಉಳಿದಿಬ್ಬರಂತೆ ಸ್ಟುಪಿಡ್​ ' ಎಂಬ ಬರಹವಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿಗರು ಸಹ ರಾಹುಲ್​ ಫೋಟೋ ಹಾಕಿ, ಮತ್ತದೇ ಸಾಲುಗಳ ಮೂಲಕ ರಾಹುಲ್​ ಬೆಂಬಲಿಗರನ್ನು ಸ್ಟುಪಿಡ್ ಎಂದು ಕರೆದಿದ್ದಾರೆ. ರಾಹುಲ್​ರನ್ನು ಸ್ಟುಪಿಡ್​ ಎಂದು ಕರೆದು, ಹೀಯಾಳಿಸಿದ್ದಾರೆ.

ಇಂತಹ ಟ್ವೀಟ್​ಗಳ ಮೂಲಕವೇ ಮೋದಿ ಬೆಂಬಲಿಗರನ್ನು ಕೆಣಕುತ್ತಿರುವ ರಮ್ಯಾ, ಈ ಹಿಂದೆ ನರೇಂದ್ರ ಮೋದಿ ಅವರನ್ನು ಕಳ್ಳ ಎಂದು ಪೋಸ್ಟ್​ ಮಾಡಿ ಟೀಕೆಗೆ ಗುರಿಯಾಗಿದ್ದರು.

ABOUT THE AUTHOR

...view details