ಕರ್ನಾಟಕ

karnataka

ETV Bharat / bharat

ದೆಹಲಿ ಫೈಟ್​: ಬಿಜೆಪಿಯಿಂದ 10, ಕಾಂಗ್ರೆಸ್​ನ 7 ಅಭ್ಯರ್ಥಿಗಳ ಲಿಸ್ಟ್​ ರಿಲೀಸ್​ - ಬಿಜೆಪಿ, ಕಾಂಗ್ರೆಸ್​ ಪಟ್ಟಿ ಪ್ರಕಟ

ದೆಹಲಿ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್​​, ಬಿಜೆಪಿ ಎರಡನೇ ಲಿಸ್ಟ್​ ರಿಲೀಸ್ ಮಾಡಿದ್ದು, ಹೊಸ ಪ್ರತಿಭೆಗಳಿಗೆ ಮಣೆ ಹಾಕಿವೆ.

Delhi Elections
ದೆಹಲಿ ವಿಧಾನಸಭೆ ಫೈಟ್​​

By

Published : Jan 21, 2020, 2:35 AM IST

ನವದೆಹಲಿ: ಮುಂದಿನ ತಿಂಗಳು ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗಾಗಿ ಆಪ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನೇರ ಫೈಟ್​ ಎದುರಾಗಿದ್ದು, ಈಗಾಗಲೇ ಎಲ್ಲ ಪಕ್ಷಗಳು ಭರದ ಕಸರತ್ತು ನಡೆಸುತ್ತಿವೆ.

ಈಗಾಗಲೇ ಆಡಳಿತ ಪಕ್ಷ ಎಲ್ಲ 70 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿ ಘೋಷಣೆ ಮಾಡಿ ಪಟ್ಟಿ ರಿಲೀಸ್​ ಮಾಡಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್​ ಹಾಗೂ ಬಿಜೆಪಿ ಕೆಲವೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್​ ಮಾಡಿ ಮೊದಲ ಪಟ್ಟಿ ರಿಲೀಸ್​ ಮಾಡಿತ್ತು. ಇದೀಗ ಎರಡು ಪಕ್ಷ ಉಳಿದ ಕ್ಷೇತ್ರಗಳಿಗೆ ಎರಡನೇ ಪಟ್ಟಿ ರಿಲೀಸ್​ ಮಾಡಿದೆ.

ಕಾಂಗ್ರೆಸ್​ ಲಿಸ್ಟ್​​

ಮೊದಲ ಲಿಸ್ಟ್​​ನಲ್ಲಿ ಕಾಂಗ್ರೆಸ್​​ 54 ಕ್ಷೇತ್ರಗಳಿಗೆ ಹಾಗೂ ಬಿಜೆಪಿ 57 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿತ್ತು. ಇದೀಗ ಕಮಲ 10 ಕ್ಷೇತ್ರ ಹಾಗೂ ಕಾಂಗ್ರೆಸ್​​ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್​ ಮಾಡಿದೆ.

ಅರವಿಂದ್​ ಕೇಜ್ರಿವಾಲ್​ ಸ್ಫರ್ಧೆ ಮಾಡುತ್ತಿರುವ ನವದೆಹಲಿ ಕ್ಷೇತ್ರದಿಂದ ರೋಮೇಶ್​​ ಸಂಬರ್​ವಾಲ್​​​ ಹಾಗೂ ಬಿಜೆಪಿಯಿಂದ ಸುನೀಲ್​ ಯಾದವ್​ ಕಣಕ್ಕಿಳಿಯಲಿದ್ದಾರೆ. ಇನ್ನು ಕಾಂಗ್ರೆಸ್​​ನಿಂದ ಬಿಜೆಪಿ ಸೇರಿದ್ದ ಮಾಜಿ ಶಾಸಕರಾದ ಅಮ್ರೇಶ್​ ಗೌತಮ್​ ಹಾಗೂ ಭಿಮೇಶ್​​ ಶರ್ಮಾಗೆ ಕಾಂಗ್ರೆಸ್​ ಟಿಕೆಟ್​ ಘೋಷಣೆ ಮಾಡಿದೆ. ಫೆ. 8ರಂದು ಚುನಾವಣೆ ನಡೆಯಲಿದ್ದು, 11ರಂದು ಫಲಿತಾಂಶ ಹೊರಬೀಳಲಿದೆ.

ABOUT THE AUTHOR

...view details