ಕೊರೊನಾ ಪ್ರೇರಿತ ಲಾಕ್ಡೌನ್ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ಮಕ್ಕಳು ಹಲವು ಇತರ ಆರೋಗ್ಯ ಸಮಸ್ಯೆಗಳಿಗೊಳಗಾಗಿ ಹೆಚ್ಚು ಅಪಾಯಕ್ಕೆ ಸಿಲುಕಿದ್ದಾರೆ. ಅಸ್ತಮಾ, ದಡಾರ, ಸಿಡುಬು ಸೇರಿದಂತೆ ಹಲವು ರೋಗಗಳು ಕಂಡು ಬಂದಿವೆ. ಅದು ಹೆಚ್ಚಾಗಿ ಲಾಕ್ಡೌನ್ ಸಂದರ್ಭದಲ್ಲೇ. ಅದಕ್ಕೆ ಕಾರಣ ಏನು? ಮಕ್ಕಳಲ್ಲಿ ಕಾಣಿಸಿಕೊಂಡ ರೋಗಗಳು ಯಾವುವು? ಹೀಗೆ ಎಲ್ಲ ಪ್ರಶ್ನೆಗಳಿಗೂ ಈ ಟಿವಿ ಭಾರತಕ್ಕೆ ಉತ್ತರ ನೀಡಿದ್ದಾರೆ ಹೈದರಾಬಾದ್ನ ರೈನ್ಬೋ ಆಸ್ಪತ್ರೆಗಳ ಸಮಾಲೋಚಕ ನವಜಾತ ಶಿಶುವೈದ್ಯೆ ವಿಜಯಾನಂದ್ ಜಮಾಲ್ಪುರಿ.
- ಕೋವಿಡ್-19 ಸಮಯದಲ್ಲಿ ಮಕ್ಕಳಲ್ಲಿ ಕಂಡುಬಂದ ಸಮಸ್ಯೆಗಳು ಯಾವುವು?
ನಿತ್ಯ ಶಾಲೆಗೆ ಹೋಗುತ್ತಿದ್ದ ಮಕ್ಕಳಿಗೆ ಏಕಾಏಕಿ (ಲಾಕ್ಡೌನ್) ಮನೆಯಿಂದ ಹೊರ ಬರದಂತೆ ನಿರ್ಬಂಧ ವಿಧಿಸಿದ ಪರಿಣಾಮ ಮನಸ್ಸಿಗೆ ಬೇಸರ ತರಿಸಿದೆ. ಬೇಸರ ಕೂಡ ಮಾನಸಿಕ ಖಿನ್ನತೆಗಳಲ್ಲಿ ಒಂದು. ಅದಕ್ಕೆ ಕಾರಣ ಲಾಕ್ಡೌನ್ನಲ್ಲಿ ಒತ್ತಡಕ್ಕೆ ಸಿಲುಕಿದ್ದು. ಒಂದಿಲ್ಲೊಂದು ಆಟದಲ್ಲಿ ಮಗ್ನರಾಗುತ್ತಿದ್ದ ಮಕ್ಕಳಿಗೆ ಕಳೆದ ನಾಲ್ಕು ತಿಂಗಳಲ್ಲಿ ಅದು ಸಾಧ್ಯವಾಗಲಿಲ್ಲ. ಇದರಿಂದಾಗಿ ತಲೆಚಿಟ್ಟು ಹಿಡಿಸಿದಂತಾಗುತ್ತದೆ. ಮನೆಯಲ್ಲೇ ಕೂತು ಹೊರಗಿನ ಪ್ರಪಂಚ ಮರೆತು ವಿಚಿತ್ರವಾಗಿ ತಯಾರಾಗಿದ್ದಾರೆ. ಅವರು ಸಾಮಾನ್ಯ ಸ್ಥಿತಿಗೆ ಮರಳಲು ಸಮಯ ಬೇಕಾಗುತ್ತದೆ.
- ಯಾವ ಮಕ್ಕಳಿಗೆ ತೀವ್ರ ಕಾಯಿಲೆ ಬರುವ ಸಾಧ್ಯತೆ ಇದೆ?
ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಅಥವಾ ತೀವ್ರವಾದ ಆಸ್ತಮಾ, ಹೃದ್ರೋಗ, ಕ್ಯಾನ್ಸರ್ನಂತಹ ರೋಗ ನಿರೋಧಕ ಶಮನಕಾರಿ ಕಾಯಿಲೆ ಹೊಂದಿರುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಹಾಗೂ ದೀರ್ಘಕಾಲೀನ ಸ್ಟೆರಾಯ್ಡ್ ಔಷಧ ಸೇವಿಸುವವರಲ್ಲಿ ಈ ಲಕ್ಷಣ ಕಂಡು ಬರುತ್ತದೆ. ಈ ಸೋಂಕುಗಳ ವಿರುದ್ಧ ಹೋರಾಡಲು ಅವರಿಗೆ ಸಾಧ್ಯವಾಗದ ಕಾರಣ, ಎಲ್ಲರೂ ಹೆಚ್ಚಿನ ಅಪಾಯಕ್ಕೆ ಸಿಲುಕಿದ್ದಾರೆ. ಆದ್ದರಿಂದ, ಅಂತಹ ಮಕ್ಕಳ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು.
- ಮಗುವಿಗೆ ದದ್ದು ಉಂಟಾಗುವುದು ಅಥವಾ ಜ್ವರ ಬರುವುದು ತುಂಬಾ ಸಾಮಾನ್ಯವಾಗಿದೆ. ಹಾಗಾದರೆ, ವೈದ್ಯರನ್ನು ಭೇಟಿ ಮಾಡಬೇಕೆಂದು ಪೋಷಕರಿಗೆ ಹೇಗೆ ಗೊತ್ತಾಗಲಿದೆ?
ದಡಾರ, ಸಿಡುಬು ಮುಂತಾದ ಸ್ಫೋಟಕ ಜ್ವರಗಳು ದದ್ದು ಮತ್ತು ಜ್ವರದಿಂದ ಕೂಡಿರುತ್ತವೆ ಎಂಬುದು ನಿಜ. ಆದರೆ, ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು, ಜ್ವರದಿಂದ ಬಳಲುತ್ತಿರುವ ಮತ್ತು ದದ್ದು ಉಂಟಾಗಿರುವ ಯಾವುದೇ ಮಗುವಿಗೆ ವೈದ್ಯರು ಚಿಕಿತ್ಸೆ ನೀಡಲೇಬೇಕು. ರೋಗ ಕಾಣಿಸಿಕೊಂಡಾಗ ಮಗುವಿನ ಚಲನವಲನ ಮತ್ತು ನಿತ್ಯ ಚಟುವಟಿಕೆಗಳಲ್ಲಿ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಪೋಷಕರು ಭಯಪಡುವ ಅಗತ್ಯವಿಲ್ಲ. ವೈದ್ಯರನ್ನು ಭೇಟಿಯಾದರೆ ಸಾಕು.
- ಆಸ್ತಮಾ ಹೊಂದಿರುವ ಮಕ್ಕಳಿಗೆ ಉಸಿರಾಟದ ತೊಂದರೆ ಉಂಟಾಗಬಹುದೆ?