ಕರ್ನಾಟಕ

karnataka

ETV Bharat / bharat

ಕರ್ನಲ್ ಸಂತೋಷ್ ಪಾರ್ಥೀವ ಶರೀರ ಇಂದು ತವರಿಗೆ; ದೆಹಲಿಯಿಂದ ಸೂರ್ಯಪೇಟ್​ಗೆ ಮರಳಿದ ಯೋಧನ ಕುಟುಂಬ

ಪೂರ್ವ ಲಡಾಖ್‌ನಲ್ಲಿ ಸೋಮವಾರ ರಾತ್ರಿ ಚೀನಾ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ತೆಲಂಗಾಣದ ಸೂರ್ಯಪೇಟೆಯ ಕರ್ನಲ್ ಸಂತೋಷ್ ಬಾಬು ಹುತಾತ್ಮರಾಗಿದ್ದರು. ಇವರ ಪಾರ್ಥೀವ ಶರೀರ ಇಂದು ಸಂಜೆಯ ವೇಳೆಗೆ ಅವರ ಹುಟ್ಟೂರಾದ ಸೂರ್ಯಪೇಟೆಗೆ ತಲುಪಲಿದೆ.

Colonel Santosh babu
ಕರ್ನಲ್ ಸಂತೋಷ್ ಬಾಬು

By

Published : Jun 17, 2020, 12:46 PM IST

ಹೈದರಾಬಾದ್​: ಭಾರತ - ಚೀನಾ ಸಂಘರ್ಷದಿಂದ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಪಾರ್ಥೀವ ಶರೀರ ಇಂದು ಮಧ್ಯಾಹ್ನ 3:30ರ ವೇಳೆ ವೇಳೆಗೆ ಹೈದರಾಬಾದ್​ ತಲುಪುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಸಂತೋಷ್ ಬಾಬು ಅವರ ಕುಟುಂಬಸ್ಥರು ರಾಜಧಾನಿ ದೆಹಲಿಯಿಂದ ಹೈದರಾಬಾದ್ ತಲುಪಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಸೋಮವಾರ ರಾತ್ರಿ ಚೀನಾ ಸೈನಿಕರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಕರ್ನಲ್ ಸಂತೋಷ್ ಬಾಬು ಹುತಾತ್ಮರಾಗಿದ್ದರು. ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯವರಾದ ಬಾಬು, ಬಿಹಾರ ರೆಜಿಮೆಂಟ್‌ನಲ್ಲಿ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಪತ್ನಿ, ಮಗಳು ಹಾಗೂ ಮಗನೊಂದಿಗೆ ಅವರು ದೆಹಲಿಯಲ್ಲಿ ವಾಸವಾಗಿದ್ದರು.

ಸೂರ್ಯಪೇಟ್​ಗೆ ಮರಳಿದ ಯೋಧನ ಕುಟುಂಬ

ಇಂದು ಬೆಳಗ್ಗೆ ಅವರ ಕುಟುಂಬ ದೆಹಲಿಯಿಂದ ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಸೂರ್ಯಪೇಟ್​ಗೆ ಪ್ರಯಾಣಿಸಿದ್ದಾರೆ. ಹುತಾತ್ಮ ಸಂತೋಷ್ ಬಾಬು ಅವರ ಪಾರ್ಥೀವ ಶರೀರ ಇಂದು ಸಂಜೆಯ ವೇಳೆಗೆ ಅವರ ಹುಟ್ಟೂರಾದ ಸೂರ್ಯಪೇಟೆಗೆ ತಲುಪಲಿದೆ.

ABOUT THE AUTHOR

...view details