ಮಲಪ್ಪುರಂ(ಕೇರಳ): ಕೋವಿಡ್-19 ಸಾಂಕ್ರಾಮಿಕ ರೋಗ ಎದುರಿಸುವಲ್ಲಿ ಕೇರಳವು ಅಳವಡಿಸಿಕೊಂಡ ವಿಧಾನಗಳು ಜಗತ್ತಿಗೇ ಮಾದರಿ. ಸೋಂಕು ಹೊಡೆದೋಡಿಸುವಲ್ಲಿ ಅಲ್ಲಿನ ಜನರ ಸಹಕಾರವನ್ನೂ ಕೂಡ ಇಡೀ ಜಗತ್ತೇ ಅನುಸರಿಸಬೇಕಾಗಿದೆ.
ಕೊರೊನಾ ವಿರುದ್ಧದ ಹೋರಾಟಕ್ಕೆ ತಾವು ಕೂಡಿಟ್ಟ ಹಣ ಅರ್ಪಿಸಿದ ಪುಟ್ಟ ಕಂದಮ್ಮಗಳು.. - Kerala's strength in combatting COVID
ಇವರ ಕೊಡುಗೆ ಎಷ್ಟು ಎಂಬುದಕ್ಕಿಂತಲೂ ಕೊಡುವ ಹೃದಯವಂತಿಕೆ ಮುಖ್ಯ. ಒಳ್ಳೆಯ ಮನಸ್ಥಿತಿಯೇ ಎಂತಹ ಖಾಯಿಲೆ ವಿರುದ್ಧವೂ ಹೋರಾಡಲೂ ಎಲ್ಲರಿಗೂ ಉತ್ತೇಜನ ನೀಡುತ್ತದೆ.
ಕೋವಿಡ್-19 ಹೋರಾಟದಲ್ಲಿ ಸರ್ಕಾರದ ನೆರವಿಗೆ ಅದೆಷ್ಟೋ ನಾಯಕರು, ನಟರು, ಎನ್ಜಿಒಗಳು ಧಾವಿಸಿವೆ. ಈ ಮಧ್ಯೆ ಪುಟ್ಟ ಮಕ್ಕಳಿಬ್ಬರು ರಾಜ್ಯದ ಬೊಕ್ಕಸಕ್ಕೆ ತಮ್ಮ ಕಾಣಿಕೆ ಅರ್ಪಿಸಲು ಮುಂದಾಗಿದ್ದಾರೆ. ಇವರ ಕೊಡುಗೆ ಎಷ್ಟು ಎಂಬುದಕ್ಕಿಂತಲೂ ಕೊಡುವ ಹೃದಯವಂತಿಕೆ ಮುಖ್ಯ. ಒಳ್ಳೆಯ ಮನಸ್ಥಿತಿಯೇ ಎಂತಹ ಖಾಯಿಲೆ ವಿರುದ್ಧವೂ ಹೋರಾಡಲೂ ಎಲ್ಲರಿಗೂ ಉತ್ತೇಜನ ನೀಡುತ್ತದೆ.
ಮಲಪ್ಪುರಂನ ಮುಹಮ್ಮದ್ ಇಮ್ರಾನ್ ಮತ್ತು ರಾಫಾ ಫಾತಿಮಾ ಎಂಬ ಇಬ್ಬರು ಮಕ್ಕಳು 5 ವರ್ಷಗಳಿಂದ ಉಳಿಸಿದ್ದ 3235 ರೂಪಾಯಿ ಪಿಗ್ಗಿ ಬ್ಯಾಂಕ್ ಉಳಿತಾಯ ಹಣವನ್ನು ಸಿಎಂ ರಿಲೀಫ್ ಫಂಡ್‌ಗೆ ನೀಡಿದ್ದಾರೆ. ಮಲಪ್ಪುರಂ ಚೆರುಕರ ಎಂಐಸಿ ಶಾಲೆಯಲ್ಲಿ 4ನೇ ಮತ್ತು 2ನೇ ತರಗತಿಗಳಲ್ಲಿ ಕ್ರಮವಾಗಿ ವ್ಯಾಸಾಂಗ ಮಾಡುತ್ತಿರುವ ಮುಹಮ್ಮದ್ ಇಮ್ರಾನ್ ಮತ್ತು ರಾಫಾ ಫಾತಿಮಾ ಎಂಬ ಇಬ್ಬರು ಮಕ್ಕಳು ತಾಲೂಕು ಕಚೇರಿಯನ್ನು ನೇರವಾಗಿ ತಲುಪಿ ತಮ್ಮ ಹಣ ನೀಡಿದ್ದಾರೆ. ಮಕ್ಕಳನ್ನು ಅಭಿನಂದಿಸಿದ ತಹಶೀಲ್ದಾರ್, ಮಕ್ಕಳಿಗೆ ಸ್ಯಾನಿಟೈಸರ್ಉಡುಗೊರೆಗಳಾಗಿ ನೀಡಿ ಧನ್ಯವಾದ ಹೇಳಿದರು.