ಗೋರಖ್‌ಪುರ(ಉತ್ತರ ಪ್ರದೇಶ):ಜಿಲ್ಲೆಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿ ಒಂಬತ್ತನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಮೇ 24 ರಂದು ಬರ್ಗದ್ವಾ ಗ್ರಾಮದ ಗೊರ್ರಾ ನದಿಯ ಬಳಿ ಕೃಷ್ಣ (25) ಮತ್ತು ದಿವಾಕರ್ (23) ಎಂಬ ಇಬ್ಬರು ಸೋದರ ಸಂಬಂಧಿಗಳನ್ನು 9 ಎಂಎಂ ಪಿಸ್ತೂಲಿನಿಂದ ಗುಂಡಿಕ್ಕಿ ಕೊಲ್ಲಲಾಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ಈ ಹಿಂದೆ ಒಂಬತ್ತು ಜನರನ್ನು ಬಂಧಿಸಿದ್ದರು. ಇದೀಗ ಪ್ರಾಥಮಿಕ ತನಿಖೆಯ ನಂತರ ಪ್ರಕರಣದ ಮತ್ತೋರ್ವ ಆರೋಪಿ ಒಂಬತ್ತನೆ ತರಗತಿಯ ವಿದ್ಯಾರ್ಥಿಯನ್ನು ದುಬಿಯಾರಿ ಸೇತುವೆ ಬಳಿ ಬಂಧಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 147, 148, 149, 302, 120 ಬಿ ಮತ್ತು 216 ರಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.