ನವದೆಹಲಿ: ಪರ ವಿರೋಧಗಳ ನಡುವೆಯೂ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದಿದ್ದು, ಗೆಜೆಟ್ ಅಧಿಸೂಚನೆಯ ಪ್ರಕಾರ ಈ ಕಾಯ್ದೆ ಶುಕ್ರವಾರದಿಂದ ಅಂದರೆ ನಿನ್ನೆಯಿಂದಲೇ ಜಾರಿಗೊಂಡಿದೆ.
ಜನವರಿ10, 2020 ರಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ನಿಬಂಧನೆಗಳು ಜಾರಿಗೆ ಬರಲಿದೆ ಎಂದು ಈ ಮೊದಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ದೇಶದೆಲ್ಲೆಡೆ ಪ್ರತಿಭಟನೆ, ಹಿಂಸಾಚಾರದ ನಡುವೆಯೂ ಸಂವಿಧಾನದ ಪ್ರಕಾರ ನಿನ್ನೆಯಿಂದಲೇ ಈ ಕಾಯ್ದೆ ಅನುಷ್ಠಾನಕ್ಕೆ ಬಂದಿದೆ.
ಪೌರತ್ವ ತಿದ್ದುಪಡಿ ಮಸೂದೆಯನ್ನು ಕಳೆದ ತಿಂಗಳು ಸಂಸತ್ತು ಅಂಗೀಕರಿಸಿದ್ದು, 31, 2014 ರಂದು ಅಥವಾ ಅದಕ್ಕೂ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದ ಹಿಂದೂ, ಕ್ರಿಶ್ಚಿಯನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ನಿರಾಶ್ರಿತರಿಗೆ ಈ ಕಾಯ್ದೆ ಅಡಿ ಭಾರತೀಯ ಪೌರತ್ವವನ್ನು ನೀಡುವುದು ಎಂದು ಉಲ್ಲೇಖಿಸಲಾಗಿದೆ.
ಇನ್ನು ಈ ಕಾಯ್ದೆ ಬಗ್ಗೆ ನಿನ್ನೆ ರಾತ್ರಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದು, ದೇಶದಲ್ಲಿ " ಪೌರತ್ವ ಕಾಯ್ದೆ " ಇಂದಿನಿಂದಲೇ ಜಾರಿ. Congratulations India. ಎಂದು ಪೋಸ್ಟ್ ಹಾಕಿದ್ದಾರೆ.