ಕರ್ನಾಟಕ

karnataka

By

Published : Nov 13, 2019, 11:56 AM IST

ETV Bharat / bharat

ಪೊಲೀಸ್​ ಶಿಬಿರದ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು! ಘಟನೆಯ ಹಿಂದೆ ನಕ್ಸಲ್​ ಕೈವಾಡ ಶಂಕೆ

ಛತ್ತೀಸ್‌ಗಡ ರಾಜ್ಯದ ರಾಜಧಾನಿ ರಾಯ್‌ಪುರದಿಂದ 350 ಕಿಲೋಮೀಟರ್ ದೂರದಲ್ಲಿರುವ ದಂತೇವಾಡದ ಮಾವೋವಾದಿ ನಕ್ಸಲ್​ ಪ್ರಾಬಲ್ಯವಿರುವ ಪೊತಾಲಿ ಗ್ರಾಮದಲ್ಲಿ ​ಶಿಬಿರ ಸ್ಥಾಪಿಸಲು ಪೊಲೀಸ್​ ಇಲಾಖೆ ನಿರ್ಧರಿಸಿತ್ತು, ಆದರೆ ಇದನ್ನು ವಿರೋಧಿಸಿದ ಬುಡಕಟ್ಟು ಜನಾಂಗದವರು ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸ್​ ಶಿಬಿರದ ವಿರುದ್ಧ ಗ್ರಾಮಸ್ತರ ಪ್ರತಿಭಟ

ಛತ್ತೀಸ್‌ಗಡ: ಪೊಲೀಸ್​ ಶಿಬಿರ ಸ್ಥಾಪಿಸುವುದರ ವಿರುದ್ದ ಇಡೀ ಗ್ರಾಮಸ್ಥರು ದಂಗೆಯೆದ್ದ ಘಟನೆ ದಂತೇವಾಡ ಜಿಲ್ಲೆಯ ಪೊತಾಲಿ ಗ್ರಾಮದಲ್ಲಿ ನಡೆದಿದೆ.

ರಾಜ್ಯ ರಾಜಧಾನಿ ರಾಯ್‌ಪುರದಿಂದ 350 ಕಿಲೋಮೀಟರ್ ದೂರದಲ್ಲಿರುವ ದಂತೇವಾಡದ, ಮಾವೋವಾದಿ ನಕ್ಸಲ್​ ಪ್ರಾಬಲ್ಯವಿರುವ ಪೊತಾಲಿ ಗ್ರಾಮದಲ್ಲಿ ​ಶಿಬಿರ ಸ್ಥಾಪಿಸಲು ಪೊಲೀಸ್​ ಇಲಾಖೆ ನಿರ್ಧರಿಸಿತ್ತು. ಆದರೆ ಇದನ್ನು ವಿರೋಧಿಸಿದ ಬುಡಕಟ್ಟು ಸಮುದಾಯದ ನೂರಾರು ಜನರು ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್​ ಶಿಬಿರದ ವಿರುದ್ಧ ಗ್ರಾಮಸ್ತರ ಪ್ರತಿಭಟನೆ

ಪೊತಾಲಿ ಗ್ರಾಮವು ಅರನ್​ಪುರ್​ ಪೊಲೀಸ್​ ಠಾಣೆಯಿಂದ 10 ಕಿ.ಮೀ ದೂರದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿದ್ದು, ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ದೂರದರ್ಶನದ ಕ್ಯಾಮರಾ ಮ್ಯಾನ್​ ಹಾಗೂ ಮೂವರು ಭದ್ರತಾ ಸಿಬ್ಬಂದಿಗಳನ್ನು ನಕ್ಸಲರು ಹತ್ಯೆ ಮಾಡಿದ ಪ್ರದೇಶದ ಸಮೀಪದಲ್ಲಿದೆ. ಘಟನೆಯ ನಂತರ ಛತ್ತೀಸ್‌ಗಡದ ಶಶಸ್ತ್ರ ಪಡೆ (ಸಿಎಎಫ್​) ಹಾಗೂ ಜಿಲ್ಲಾ ಮೀಸಲು ಪಡೆ(ಡಿಆರ್​ಜಿ)ಯನ್ನು ಶಿಬಿರದ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಡಿಐಜಿ ತಿಳಿಸಿದ್ದಾರೆ.

ಘಟನೆ ಹಿಂದೆ ನಕ್ಸಲ್​ ಕುಮ್ಮಕ್ಕು:

ಪೊಲೀಸ್ ಶಿಬಿರದ ವಿರುದ್ದ ಗ್ರಾಮಸ್ಥರ ಪ್ರತಿಭಟನೆಯ ಹಿಂದೆ ನಕ್ಸಲ್ ಕುಮ್ಮಕ್ಕಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ನಕ್ಸಲ್​ ಪ್ರಾಬಲ್ಯವಿರುವ ಪ್ರದೇಶದಲ್ಲಿ ಪೊಲೀಸ್​ ಶಿಬಿರ ಸ್ಥಾಪನೆಯಾಗದಂತೆ ಗ್ರಾಮಸ್ಥರ ಮೂಲಕ ಒತ್ತಡ ಹೇರಲಾಗುತ್ತಿದೆ. ಈ ಭಾಗದಲ್ಲಿ ಭದ್ರತೆ ಒದಗಿಸಲು ಹಾಗೂ ನಕ್ಸಲ್​ ನಿಗ್ರಹಕ್ಕೆ ಪೊಲೀಸ್​ ಶಿಬಿರ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details