ಕರ್ನಾಟಕ

karnataka

ETV Bharat / bharat

ಸಾಮಾಜಿಕ ಅಂತರ ಕಾಪಾಡಿಕೊಂಡು ಜನರಿಂದ ಅಗತ್ಯ ವಸ್ತುಗಳ ಖರೀದಿ - ಸಾಮಾಜಿಕ ಅಂತರ

ಕೊರೊನಾ ವೈರಸ್​ ಹರಡದಂತೆ ದೇಶವ್ಯಾಪಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಯಾವುದೇ ಪ್ರದೇಶಕ್ಕೆ ಹೋದರೂ ಕನಿಷ್ಠ ಒಂದು ಮೀಟರ್​ ಅಂತರ ಕಾಯ್ದುಕೊಳ್ಳಬೇಕಿರುವುದು ಈಗಿನ ತುರ್ತು.

Chalk and circle
ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿರುವ ಜನರ

By

Published : Mar 26, 2020, 9:28 AM IST

ಚಂಡೀಗಢ: ದೇಶವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್ (ಕೊವಿಡ್-19) ಹಾವಳಿಗೆ ಕೊಕ್ಕೆ ಹಾಕಲು ಸರ್ಕಾರ ರಾಷ್ಟ್ರವ್ಯಾಪಿ ಬಂದ್‌(ಲಾಕ್ ಡೌನ್‌)​ ಆದೇಶ ಹೊರಡಿಸಿದೆ. ಇದರ ಮೂಲ ಉದ್ದೇಶ ಜನರು ಸಾಮಾಜಿಕ ಅಂತರ ಕಾಪಡಿಕೊಳ್ಳುವುದಾಗಿದೆ. ಜನರೂ ಕೂಡಾ ಇದಕ್ಕೆ ಉತ್ತಮ ರೀತಿಯಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಂಡೀಗಢದಲ್ಲಿ ಜನರು ತಾವು ವಿಭಿನ್ನ ಎಂದು ತೋರಿಸಿ ಮಾದರಿಯಾಗಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ಬುಧವಾರ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಫೊಟೋಗಳಲ್ಲಿ ಜನರು ಒಂದು ಮೀಟರ್​ ದೂರದ ಅಂತರದಲ್ಲಿ ನೆಲದ ಮೇಲೆ ಸುಣ್ಣದಿಂದ ಬಾಕ್ಸ್​​ಗಳನ್ನು ಹಾಕಿಕೊಂಡು ಪ್ರತ್ಯೇಕವಾಗಿ ಅಂಗಡಿ ಮುಂದೆ ನಿಂತಿರುವುದು ಕಾಣುತ್ತಿದೆ. ಮೂಲಕ ತಾಳ್ಮೆಯಿಂದ ಅಗತ್ಯ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ.

ನಾನು ಈ ಛಾಯಾಚಿತ್ರಗಳನ್ನು ಸ್ವೀಕರಿಸಿದ್ದೇನೆ. ಪಂಜಾಬಿಗಳಿಂದ ಅದ್ಭುತವಾದ ಶಿಸ್ತು ಕಂಡುಬಂದಿದೆ. ನೀವು ಮನೆಯಲ್ಲಿಯೇ ಇರಿ ಮತ್ತು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಿ. ನೀವೆಲ್ಲರೂ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರ ಮತ್ತು ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details