ರಾಜನಂದಗಾಂವ್ (ಛತ್ತೀಸ್ಗಢ):ಮಧ್ಯರಾತ್ರಿ ನಕ್ಸಲರು - ಪೊಲೀಸರ ನಡುವೆ ನಡೆದ ಕಾರ್ಯಾಚರಣೆ ವೇಳೆ ನಾಲ್ವರು ಮಾವೋವಾದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುತಾತ್ಮರಾಗಿದ್ದು, ರಾಜನಂದಗಾವಂವ್ ಹಾಗೂ ಮದನ್ವಾಡ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ನಕ್ಸಲರು ತಡರಾತ್ರಿ ಪೊಲೀಸರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲು ಮುಂದಾಗಿದ್ದಾರೆ. ಈ ವೇಳೆ, ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಮದನ್ವಾಡ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ಯಾಮ್ ಕಿಶೋರ್ ಶರ್ಮಾ ಗುಂಡು ತಗುಲಿ ಪ್ರಾಣ ಕಳೆದುಕೊಂಡಿದ್ದಾರೆ.
ಎನ್ಕೌಂಟರ್ನಲ್ಲಿ ಸಾವನ್ನಪ್ಪಿರುವ ನಾಲ್ವರು ನಕ್ಸಲರ ಮೃತದೇಹ, AK-47ರೈಫಲ್, 1 ಎಸ್ಎಲ್ಆರ್ ಬಂದೂಕು ಹಾಗೂ 315 ಬೊರಿ ರೈಫಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಹಿಂದೆ ಕೂಡ ಇದೇ ಪ್ರದೇಶದಲ್ಲಿ ನಾಲ್ವರು ಯೋಧರು ಕಣ್ಮರೆಯಾಗಿದ್ದು, ಇಲ್ಲಿಯವರೆಗೆ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.