ಅಹಮ್ಮದನಗರ: ಕಳೆದ 11 ದಿನಗಳಲ್ಲಿ ಸುಪ್ರಸಿದ್ಧ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಬರೋಬ್ಬರಿ 8 ಲಕ್ಷದ 23 ಸಾವಿರ ಜನರು ಭೇಟಿ ನೀಡಿದ್ದಾರೆ. ಕ್ರಿಸ್ಮಮಸ್ ಹಾಗೂ ಹೊಸ ವರ್ಷದ ಈ 11 ದಿನಗಳಲ್ಲಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಹೊಸ ವರ್ಷಕ್ಕೆ ಶಿರಡಿ ಸಾಯಿಬಾಬಾಗೆ ಭೇಟಿ ಕೊಟ್ಟ ಭಕ್ತರೆಷ್ಟು? ಹರಿದು ಬಂದ ಹಣ ಎಷ್ಟು ಗೊತ್ತೇ?
ದೇಶದ ಶ್ರೀಮಂತ ದೇಗುಲ ಪೈಕಿ ಒಂದಾದ ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ಶಿರಡಿ ಸಾಯಿ ಬಾಬಾ ಮಂದಿರಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡಿದ್ದಾರೆ.
Shirdi Saibaba Temple
ಈ ಪರಿಣಾಮ ಬರೋಬ್ಬರಿ 16ಕೋಟಿ 93 ಲಕ್ಷದ 37 ಸಾವಿರ ರೂ. ಮೊತ್ತದ ನಗದು ಸೇರಿ ಇತರ ಕಾಣಿಕೆಗಳ ಸಂಗ್ರಹವಾಗಿದೆ. ಇದರಲ್ಲಿ 48 ಲಕ್ಷದ 11 ಸಾವಿರ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳಾಗಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ದೇಶದ ಶ್ರೀಮಂತ ದೇಗುಲ ಪೈಕಿ ಒಂದಾದ ಮಹಾರಾಷ್ಟ್ರದ ಅಹಮದ್‌ನಗರದಲ್ಲಿರುವ ಶಿರಡಿ ಸಾಯಿ ಬಾಬಾ ದೇಗುಲಕ್ಕೆ ಇನ್ನು 2019ರಲ್ಲಿ ದಾಖಲೆಯ 287 ಕೋಟಿ ರೂ ದೇಣಿಗೆ ರೂಪದಲ್ಲಿ ಹರಿದು ಬಂದಿದೆ. ಇದರಲ್ಲಿ 19 ಕೆಜಿ ಚಿನ್ನ, 392 ಕೆಜಿ ಬೆಳ್ಳಿ ಸೇರಿದೆ.