ರಾಮ್‌ಗಂಧ್(ಜಾರ್ಖಂಡ್):ಕೊರೊನಾ ಲಾಕ್ಡೌನ್ನಿಂದ ಎಷ್ಟೋ ಜನರ ಬಾಳು ಬೀದಿಪಾಲಾಗಿದೆ. ಅದೆಷ್ಟೋ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಲಾಕ್ಡೌನ್ ವಿಶೇಷ ಚೇತನರ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿದ್ದು, ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಈಗ ಅಂತಹ ಸ್ಥಿತಿ ರಾಜ್ಯ ದಿವ್ಯಾಂಗ ಕ್ರಿಕೆಟ್ ತಂಡದ ನಾಯಕನಿಗೆ ಬಂದಿದೆ.
ಜಾರ್ಖಂಡ್ ರಾಜ್ಯದ ದಿವ್ಯಾಂಗ ಕ್ರಿಕೆಟ್ ತಂಡದ ನಾಯಕ ಜಿತೇಂದ್ರ ಪಟೇಲ್ರ ಜೀವನ ಶೋಚನೀಯವಾಗಿದೆ. ಇವರು ಈಗ ಒಂದೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಬಂದೊದಗಿದೆ. ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ, ಅವರು ಈಗ ಹಸಿವಿನಿಂದ ಬಳಲುತ್ತಿದ್ದಾರೆ. ತನ್ನ ಸಾಧನೆಯ ಮೂಲಕ ರಾಜ್ಯದ ಘನತೆಯನ್ನು ಹೆಚ್ಚಿಸಿದ್ದ ಇವರು ಸರ್ಕಾರದ ನಿರ್ಲಕ್ಷ್ಯದಿಂದ ಸಂಕಷ್ಟದ ಬದಕು ಎದುರಿಸುತ್ತಿದ್ದಾರೆ.
ರಾಜ್ಯದ ದಿವ್ಯಾಂಗ ಕ್ರಿಕೆಟ್ ತಂಡದ ನಾಯಕನಾಗಿದ್ದರು ಒಂದೊತ್ತಿನ ಊಟಕ್ಕೂ ಪರದಾಟ ಸರ್ಕಾರದ ನಿರ್ಲಕ್ಷ್ಯ ಮತ್ತು ಲಾಕ್ಡೌನ್ನಿಂದ ನನ್ನ ಪರಿಸ್ಥಿತಿ ಸಾಕಷ್ಟು ಕರುಣಾಜನಕವಾಗಿದೆ ಎಂದು ಜಾರ್ಖಂಡ್ ದಿವ್ಯಾಂಗ ಕ್ರಿಕೆಟ್ ತಂಡದ ನಾಯಕ ಜಿತೇಂದ್ರ ಪಟೇಲ್ ಹೇಳುತ್ತಾರೆ. ಇಲ್ಲಿಯವರೆಗೆ ಅವರಿಗೆ ಸರ್ಕಾರದ ಪಿಂಚಣಿ ಕೂಡ ಸಮಯಕ್ಕೆ ಸರಿಯಾಗಿ ಲಭ್ಯವಾಗಿಲ್ಲ. ಪಾಟ್ನಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ದಿವ್ಯಾಂಗ ಈಜು ಸ್ಪರ್ಧೆಯಲ್ಲಿ ಜಿತೇಂದ್ರ ಜಾರ್ಖಂಡ್ ಪರ ಚಿನ್ನದ ಪದಕ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಅನೇಕ ನೃತ್ಯ ಸ್ಪರ್ಧೆಯಲ್ಲಿ ರಾಷ್ಟ್ರೀಯ ಖ್ಯಾತಿಯನ್ನೂ ಗಳಿಸಿದ್ದಾರೆ. ಅನೇಕ ಕಲೆಗಳು ತಿಳಿದಿದ್ದರೂ ಅವರನ್ನ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ.
ಜಿತೇಂದ್ರ ಕ್ರಿಕೆಟ್ನಲ್ಲಿ ಮಾತ್ರವಲ್ಲದೇ ಈಜುಗಾರಿಕೆಯಲ್ಲೂ ತುಂಬಾ ಒಳ್ಳೆಯ ಕ್ರೀಡಾಪಟು. ಇಷ್ಟೆಲ್ಲ ಪ್ರತಿಭೆಯನ್ನು ಹೊಂದಿರುವ ಜಿತ್ತೇಂದ್ರರವರು ಲಾಕ್ಡೌನ್ನಿಂದಾಗಿ ತುತ್ತು ಅನ್ನಕ್ಕೂ ಪರದಾಡು ಪರಿಸ್ಥಿತಿ ಬಂದಿರುವುದು ದುರಾದೃಷ್ಟವೆ ಸರಿ.