ಆರ್ ಎಸ್ ಪುರ(ಜಮ್ಮು-ಕಾಶ್ಮೀರ):ಪಾಕಿಸ್ತಾನದಿಂದ ಭಾರತಕ್ಕೆ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್‌ಎಫ್) ವಿಫಲಗೊಳಿಸಿದೆ.
ಮಾದಕವಸ್ತುಗಳ ಕಳ್ಳಸಾಗಣೆ: ಪಾಕ್ ಯತ್ನ ವಿಫಲಗೊಳಿಸಿದ ಬಿಎಸ್ಎಫ್ - ಬಿಎಸ್ಎಫ್ನ ಐಜಿ ಎನ್.ಎಸ್ ಜಮ್ವಾಲ್
ಜಮ್ಮು ವಿಭಾಗದ ಆರ್ಎಸ್ ಪುರ ಸೆಕ್ಟರ್‌ನಲ್ಲಿ ಕಾರ್ಯಾಚರಣೆ ನಡೆಸಿದ ಬಿಎಸ್ಎಫ್ ಯೋಧರು ಪಾಕಿಸ್ತಾನದ ಆರ್ನಿಯಾದಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳಸಾಗಾಣೆಯ ಯತ್ನ ವಿಫಲಗೊಳಿಸಿದ ಬಿಎಸ್ಎಫ್
ಜಮ್ಮು ವಿಭಾಗದ ಅಂತಾರಾಷ್ಟ್ರೀಯ ಗಡಿ ಆರ್ ಎಸ್ ಪುರ ಸೆಕ್ಟರ್‌ನಲ್ಲಿ ಘಟನೆ ನಡೆದಿದ್ದು, ಪಾಕಿಸ್ತಾನದ ಆರ್ನಿಯಾದಿಂದ ಭಾರತಕ್ಕೆ ಪೈಪ್ಲೈನ್ ಮೂಲಕ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ ರಾತ್ರಿ ಕಾರ್ಯಾಚರಣೆಯಲ್ಲಿದ್ದ ಯೋಧರು ಅಕ್ರಮ ಸಾಗಣೆಯ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ.
ಬಿಎಸ್ಎಫ್ನ ಐಜಿ ಎನ್.ಎಸ್. ಜಮ್ವಾಲ್ ಈ ಕುರಿತು ಮಾತನಾಡಿದ್ದು, "ಬುದ್ವಾರ್ ಪೋಸ್ಟ್ ಬಳಿ ಪೈಪ್ ಮೂಲಕ ತಳ್ಳಲಾಗುತ್ತಿದ್ದ 62 ಪ್ಯಾಕೆಟ್ ಮಾದಕ ವಸ್ತುಗಳು, ಎರಡು ಪಿಸ್ತೂಲ್ ಮತ್ತು ನಾಲ್ಕು ಮ್ಯಾಗಜೀನ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ" ಎಂದು ಮಾಹಿತಿ ನೀಡಿದರು.
Last Updated : Sep 20, 2020, 3:56 PM IST