ಕರ್ನಾಟಕ

karnataka

By

Published : Aug 11, 2019, 5:11 PM IST

ETV Bharat / bharat

ಸೋನಿಯಾ 'ಕೈ' ಹಂಗಾಮಿ ಅಧ್ಯಕ್ಷೆ, ಉಳಿದ ನಾಯಕರು ತಾಯಿ, ಮಗನಿಗೆ ಗುಲಾಮರು: ಬಿಜೆಪಿ ಅಣಕ

ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥರಾದ ಅಮಿತ್ ಮಾಳವೀಯಾ ತಮ್ಮ ಟ್ವಿಟ್ಟರ್​ನಲ್ಲಿ ''ಪ್ರೀತಿಯಿಂದ ಕಾಂಗ್ರೆಸ್​ಗೆ...'' ಎಂದು ಬರೆದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ಬಿಜೆಪಿ ಅಣಕವಾಡಿ, 'ಇದು ಭಟ್ಟಂಗಿತನ ಮತ್ತು ಗುಲಾಮಗಿರಿಯ ನಡೆ' ಎಂದಿದೆ.

ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥರಾದ ಅಮಿತ್ ಮಾಳವೀಯಾ ತಮ್ಮ ಟ್ವಿಟ್ಟರ್​ನಲ್ಲಿ ''ಪ್ರೀತಿಯಿಂದ ಕಾಂಗ್ರೆಸ್​ಗೆ...'' ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ 'ನೀವು ನಿಮ್ಮ ಇಡೀ ಜೀವನದಲ್ಲಿ- ಉಳಿದ ಕಾಂಗ್ರೆಸ್​ ನಾಯಕರು ತಾಯಿ, ಮಗನಿಗೆ ಗುಲಾಮರಾಗಿರುತ್ತೀರಿ' ಎಂದು ಅಣಕವಾಡಲಾಗಿದೆ.

ರಾಹುಲ್​ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನವನ್ನು 72 ವರ್ಷದ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಜವಾಬ್ದಾರಿಯನ್ನು ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ನೀಡಲು ನಿರ್ಧರಿಸಿದೆ. ಇದಕ್ಕೂ ಮೊದಲು 1998ರ ಮಾರ್ಚ್​ 14 ಮತ್ತು 2017ರ ಡಿಸೆಂಬರ್​ 16ರ ನಡುವೆ ಸುದೀರ್ಘ 19 ವರ್ಷಗಳ ಕಾಲ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು. ಬಳಿಕ ಪುತ್ರ ರಾಹುಲ್​ ಅವರಿಗೆ ಅಧ್ಯಕ್ಷ ಸ್ಥಾನ ಹಸ್ತಾಂತರಿಸಿದ್ದರು.

ABOUT THE AUTHOR

...view details