ಕರ್ನಾಟಕ

karnataka

ETV Bharat / bharat

ಬಿಹಾರ ಎಲೆಕ್ಷನ್: ನಿತೀಶ್ ಕುಮಾರ್​ ಮುಂದೆ ಸಮಸ್ಯೆಗಳ ಸರಮಾಲೆ

ಬಿಹಾರ ವಿಧಾನಸಭಾ ಎಲೆಕ್ಷನ್​ಗೆ ದಿನಗಣನೆ ಶುರುವಾಗಿದೆ. ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿರುವ ಜೆಡಿಯು ಮುಂದೆ ಸಮಸ್ಯೆಗಳ ಸರಮಾಲೆಯೇ ಇದೆ.

Bihar Elections 2020
ಪ್ರಣಾಳಿಕೆ ರಿಲೀಸ್

By

Published : Oct 17, 2020, 7:01 PM IST

ಪಾಟ್ನಾ(ಬಿಹಾರ): ವಿಧಾನಸಭಾ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿಯಿದೆ. ಸಿಎಂ ನಿತೀಶ್ ಕುಮಾರ್ ಸತತ ನಾಲ್ಕನೇ ಬಾರಿಗೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ, ಅವರಿಗೆ ಹಲವಾರು ಸಮಸ್ಯೆಗಳು ಎದುರಾಗಿವೆ.

ಜೆಡಿಯುಗೆ ಆರ್​ಜೆಡಿ, ಕಾಂಗ್ರೆಸ್​, ಸಿಪಿಐ, ಸಿಪಿಐ(ಎಂ) ಗಳ ಮೈತ್ರಿ ವಿರೋಧಕ್ಕಿಂತ ಈ ಹಿಂದೆ ಎನ್​ಡಿಎ ಮೈತ್ರಿಯಲ್ಲಿದ್ದ ಎಲ್​​​ಜೆಪಿ ವಿರೋಧವೇ ಹೆಚ್ಚಾಗಿದೆ. ಲೋಕ ಜನಶಕ್ತಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವ ಮೂಲಕ ಚುನಾವಣಾ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದೆ.

ಬಿಜೆಪಿಯೊಂದಿಗೆ ಜೆಡಿಯು ಮತ್ತು ಎಲ್​ಜೆಪಿ ಮೈತ್ರಿ ಮಾಡಿಕೊಂಡಿದ್ದರೂ, ಎಲ್​​​​ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಜೆಡಿಯು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಮಾತ್ರ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದೆ.

ಸಾಂಪ್ರದಾಯಿಕವಾಗಿ ಜಾತಿ ಆಧಾರಿತ ರಾಜಕಾರಣದಿಂದ ಪ್ರಾಬಲ್ಯ ಹೊಂದಿರುವ ಬಿಹಾರದಲ್ಲಿ ಕೆಳಜಾತಿಯ ಮತಗಳ ವಿಶ್ವಾಸ ಗಳಿಸಲು ನಿತೀಶ್ ಕುಮಾರ್ ಪ್ರಯತ್ನಿಸುತ್ತಿದ್ದರು. ಅದಕ್ಕಾಗಿಯೇ ಮಹಾ ದಲಿತ್ ಎಂಬ ಸಂಘಟನೆ ಕೂಡ ರಚಿಸಿದ್ದರು. ಆದ್ರೆ, ಎಲ್​ಜೆಪಿ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರ ಹಠಾತ್ ನಿಧನ ಜೆಡಿಯುಗೆ ಭಾರಿ ಹೊಡೆತ ಕೊಟ್ಟಿದೆ. ಪಾಸ್ವಾನ್ ನಿಧನದ ನಂತರ ಜೆಡಿಯು ದಲಿತ ಬೆಂಬಲಿಗರೆಲ್ಲ ಎಲ್​ಜೆಪಿಯತ್ತ ವಾಲುತ್ತಿದ್ದಾರೆ.

ಜೆಡಿಯು ಪಕ್ಷದಲ್ಲಿ ರಜಪೂತ ಸಮುದಾಯದ ವಿಶ್ವಾಸಾರ್ಹ ವ್ಯಕ್ತಿ ಇಲ್ಲದಿರುವುದು ಕೂಡ ನಿತೀಶ್​ ಕುಮಾರ್​ ಹಿನ್ನಡೆಗೆ ಕಾರಣವಾಗಬಹುದು ಎನ್ನಲಾಗಿದೆ. ಇನ್ನು ಆರ್​ಜೆಡಿ ಜಗದಾನಂದ ಸಿಂಗ್​​ ಅವರಂತಹ ರಜಪೂತರನ್ನ ಪಕ್ಷದಲ್ಲಿಟ್ಟುಕೊಂಡಿದ್ದು, ಮತಗಳನ್ನ ಸೆಳೆಯುವಲ್ಲಿ ಯಶಸ್ವಿಯಾಗುವ ವಿಶ್ವಾಸ ಹೊಂದಿದೆ. ನಿತೀಶ್ ಕುಮಾರ್​​ ಆಡಳಿತದಲ್ಲಿ ಆರ್ಥಿಕತೆ ನೆಲ ಕಚ್ಚಿದ್ದು, ನಿರುದ್ಯೋಗ ಸಮಸ್ಯೆ ದುಪ್ಪಟ್ಟಾಗಿದೆ. ಆರ್​​​ಜೆಡಿ ಪ್ರತಿ ಚುನಾವಣೆಯಲ್ಲೂ ಆಡಳಿತ ಪಕ್ಷದ ವೈಫಲ್ಯಗಳನ್ನ ಜನತೆ ಮುಂದಿಡುತ್ತಲೇ ಬಂದಿದೆ.

ಸರ್ಕಾರದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡದೇ ನಿತೀಶ್ ಕುಮಾರ್ ವಲಸೆಯನ್ನು ಉತ್ತೇಜಿಸುತ್ತಿದ್ದಾರೆ. ಪ್ರವಾಸೋದ್ಯಮ ಕೂಡ ನೆಲ ಕಚ್ಚಿದೆ. ಉದ್ಯೋಗ ಕಳೆದುಕೊಂಡು ಸಾವಿರಾರು ಕುಟುಂಬಗಳು ಬೀದಿಗೆ ಬಂದಾಗಲೂ ಸಿಎಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.ಈ ಚುನಾವಣೆಯಲ್ಲಿ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದ್ದು, ಜೆಡಿಯುಗೆ ಯುವ ಮತಗಳ ಕೊರತೆ ಕಾಣಬಹುದು.

ತೇಜಸ್ವಿ ಯಾದವ್​ ಮತ್ತು ಚಿರಾಗ್ ಪಾಸ್ವಾನ್​ಗೆ ಸರ್ಕಾರ ಮುನ್ನಡೆಸುವಲ್ಲಿ ಅನುಭವದ ಕೊರತೆಯಿದೆ. ಈ ಅಂಶವನ್ನು ನಿತೀಶ್ ಕುಮಾರ್​ ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ.

2017 ರಲ್ಲಿ ಮೇವು ಹಗರಣದಲ್ಲಿ ಶಿಕ್ಷೆಗೊಳಗಾದ ನಂತರ ಪ್ರಸ್ತುತ 27.5 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಈ ವರ್ಷ ಪ್ರಚಾರ ಕ್ಷೇತ್ರದಲ್ಲಿ ಇರುವುದಿಲ್ಲ.

ABOUT THE AUTHOR

...view details