ಕೋಲ್ಕತ್ತಾ: ಕೊರೊನಾ ಸೋಂಕು ಎಲ್ಲ ಕಡೆ ವ್ಯಾಪಿಸುತ್ತಿರುವ ಹಿನ್ನೆಲೆ ಮಾಸ್ಕ್ ಹಾಕುವುದನ್ನು ಅದರಲ್ಲೂ ಸಾರ್ವಜನಿಕರ ಪ್ರದೇಶದಲ್ಲಿ ಮಾಸ್ಕ್ ಧರಿಸುವುದನ್ನು ಪಶ್ಚಿಮ ಬಂಗಾಳ ಸರ್ಕಾರ ಕಡ್ಡಾಯಗೊಳಿಸಲಾಗಿದೆ.
ಎಲ್ಲಾ ಸಮಯದಲ್ಲೂ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದರಿಂದ ವೈರಸ್ ಹರಡುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಬಾಯಿ ಮತ್ತು ಮೂಗನ್ನು ಮಾಸ್ಕ್ ಅಥವಾ ಲಭ್ಯವಿರುವ ಯಾವುದೇ ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ದುಪಟ್ಟಾ (ಉದ್ದನೆಯ ಸ್ಕಾರ್ಫ್), ಗಾಂಚಾ (ಹತ್ತಿ ಟವೆಲ್), ಕರವಸ್ತ್ರದಂತಹ ಬಟ್ಟೆಗಳನ್ನು ಸಹ ಬಳಕೆ ಮಾಡಿಕೊಳ್ಳಬಹುದು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿಯವರ ಆದೇಶದಲ್ಲಿ ತಿಳಿಸಲಾಗಿದೆ.
ಎಲ್ಲರೂ ಕೂಡ ಕಡ್ಡಾಯವಾಗಿ ಈ ನಿಯಮವನ್ನು ಪಾಲನೆ ಮಾಡಲೇಬೇಕು. ಇದರಿಂದ ಕೊರೊನಾ ನಿಯಂತ್ರಣಕ್ಕೆ ತರಬಹುದು ಎಂದು ಆದೇಶಿಸಲಾಗಿದೆ. ಭಾನುವಾರದವರೆಗೆ ರಾಜ್ಯದಿಂದ 130 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
Kolkata:The West Bengal government has made it mandatory to cover nose and mouth with facial masks or any other piece of cloth, especially at public places, to prevent transmission of coronavirus.