ಪಾಟ್ನಾ:ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲೀಮೀನ್ (ಎಐಐಎಂಐಎಂ) ಪಕ್ಷ ಸ್ಪರ್ಧಿಸಲು ಸಜ್ಜಾಗಿದೆ.
ಪಕ್ಷವು ಚುನಾವಣೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದು, 32 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಹೇಳಿದೆ. ಮುಸ್ಲಿಂ ಮತಗಳನ್ನು ಗುರಿಯಾಗಿಸಿಕೊಂಡು ಅನೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಬಿಹಾರ ವಿಧಾನಸಭಾ ಚುನಾವಣೆ ಎಐಐಎಂಐಎಂ ಪಕ್ಷ ಸ್ಪರ್ಧಿಸಲು ಸಜ್ಜು ಕಟಿಹಾರ್, ಪೂರ್ಣಿಯಾ, ದರ್ಬಂಗಾ, ಸಮಸ್ತಿಪುರ, ಪಾಟ್ನಾ, ಬಲರಾಂಪುರ್, ಬ್ಯಾರಿ, ಅಮೌರ್, ಬೈಸಿ, ಜೋಕಿಹಾತ್, ಮಹೋಬಾ, ಬೆಟ್ಟಿಯಾ, ರಾಮ್‌ನಗರ, ಧಾಕಾ, ಪರಿಹಾರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್‌ನ ಪ್ರಬಲ ಪ್ರದೇಶದಲ್ಲಿ ಎಐಎಂಐಎಂ ಸ್ಪರ್ಧಿಸಲು ಸಜ್ಜಾಗುತ್ತಿದೆ. ವಿಶೇಷವಾಗಿ ಅರೇರಿಯಾ, ಕಿಶನ್‌ಗಂಜ್, ಪೂರ್ಣಿಯಾ ಮತ್ತು ಕಟಿಹಾರ್-ಮುಸ್ಲಿಂ ಪ್ರಾಬಲ್ಯದ ಈ ಪ್ರದೇಶಗಳಲ್ಲಿ ಪಕ್ಷ ಹೆಚ್ಚು ಆಸಕ್ತಿ ತೋರಿಸಿದೆ.
ಪಕ್ಷವು ಎ-ಪ್ಲಸ್, ಎ ಮತ್ತು ಬಿ 3 ಶ್ರೇಣಿಗಳನ್ನು ಗುರುತಿಸುವ ಪ್ರದೇಶಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಆಧಾರದ ಮೇಲೆ ಸ್ಥಾನಗಳನ್ನು ಪ್ರತ್ಯೇಕಿಸಿದೆ. ಮುಸ್ಲಿಂ ಮತದಾರರು ಶೇ.32 ಕ್ಕಿಂತ ಹೆಚ್ಚು ಇರುವ ಸ್ಥಾನಗಳನ್ನು ಎ ಪ್ಲಸ್ ಎಂದು ಗುರುತಿಸಲಾಗಿದೆ. ಶೇ 15 ರಿಂದ 20 ರಷ್ಟು ಜನಸಂಖ್ಯೆಯನ್ನು ಬಿ ದರ್ಜೆಯಲ್ಲಿ ಇರಿಸಲಾಗಿದೆ ಮತ್ತು ಅಂತಹ 16 ಸ್ಥಾನಗಳಿವೆ.