ಕರ್ನಾಟಕ

karnataka

ಕೋರ್ಸ್ ಮುಗಿಯುವ ಮುನ್ನ ಶಿಕ್ಷಣ ಸಾಲ ಪಾವತಿಸಿದರೆ ಬಡ್ಡಿ ವಿಧಿಸುವಂತಿಲ್ಲ : ಕೋರ್ಟ್​ ಆದೇಶ

By

Published : Apr 7, 2020, 9:43 PM IST

Updated : Apr 7, 2020, 9:59 PM IST

ಕೋರ್ಸ್ ಮುಗಿಯುವ ಮೊದಲು ಸಂಪೂರ್ಣ ಸಾಲ ಪಾವತಿಸಿದರೆ ಬ್ಯಾಂಕ್​ಗಳು ಶಿಕ್ಷಣ ಸಾಲದ ಮೇಲಿನ ಬಡ್ಡಿ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಅಹಮದಾಬಾದ್ ಗ್ರಾಹಕ ವಿವಾದ ಪರಿಹಾರ ವೇದಿಕೆ ಆದೇಶಿಸಿದೆ.

education loan
ಶಿಕ್ಷಣ ಸಾಲ

ಅಹಮದಾಬಾದ್‌ (ಗುಜರಾತ್): ಗುಜರಾತ್‌ನ ಅಹಮದಾಬಾದ್‌ ನಿವಾಸಿ ಅನುಪಮ್ ಉಚಿತ್ ಅವರು ತಮ್ಮ ಮಗಳ ಎಂಬಿಬಿಎಸ್ ಕೋರ್ಸ್‌ಗೆ ಶಿಕ್ಷಣ ಸಾಲವನ್ನು ತೆಗೆದುಕೊಂಡ ಬ್ಯಾಂಕ್, ಕೋರ್ಸ್ ಮುಗಿಯುವ ಮೊದಲು ಸಂಪೂರ್ಣ ಸಾಲದ ಮೊತ್ತವನ್ನು ಪಾವತಿಸಿದ ನಂತರವೂ ಬ್ಯಾಂಕ್​ ದಾಖಲೆಗಳನ್ನು ಹಿಂದಿರುಗಿಸಲು ನಿರಾಕರಿಸಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಅಹಮದಾಬಾದ್ ಗ್ರಾಹಕ ವಿವಾದ ಪರಿಹಾರ ವೇದಿಕೆ ಕೋರ್ಸ್ ಮುಗಿಯುವ ಮೊದಲು ಸಂಪೂರ್ಣ ಸಾಲವನ್ನು ಪಾವತಿಸಿದರೆ ಬ್ಯಾಂಕ್​ಗಳು ಶಿಕ್ಷಣ ಸಾಲದ ಮೇಲಿನ ಬಡ್ಡಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.

ಅನುಪಮ್ ಉಚಿತ್ 2011 ರಲ್ಲಿ ತಮ್ಮ ಮಗಳ ಎಂಬಿಬಿಎಸ್ ಕೋರ್ಸ್‌ಗಾಗಿ ಬ್ಯಾಂಕಿನಿಂದ ಶೈಕ್ಷಣಿಕ ಸಾಲವನ್ನು ತೆಗೆದುಕೊಂಡಿದ್ದರು. ಕೋರ್ಸ್ ಮುಗಿಯುವ ಮೊದಲೇ ತಂದೆ ಸಾಲದ ಮೊತ್ತವನ್ನು ಪೂರ್ಣವಾಗಿ ಪಾವತಿಸಿದ್ದರು. ಆಸ್ತಿಯನ್ನು ಅಡವಿಟ್ಟು ಈ ಸಾಲ ಪಡೆದಿದ್ದರು. ಆದರೆ ಆಸ್ತಿಯ ದಾಖಲೆ ಪತ್ರಗಳನ್ನು ಹಿಂದಿರುಗಿಸಲು ಬ್ಯಾಂಕ್ ನಿರಾಕರಿಸಿತು.

ಈ ಕುರಿತು ಗ್ರಾಹಕ ವಿವಾದಗಳ ಪರಿಹಾರ ವೇದಿಕೆಗೆ ಅರ್ಜಿಯನ್ನು ಸಲ್ಲಿಸಿದರು. ಬ್ಯಾಂಕ್ ಸಾಲದ ಮೇಲೆ ಬಡ್ಡಿ ವಿಧಿಸಲು ಸಾಧ್ಯವಿಲ್ಲ ಮತ್ತು ಅಡಮಾನ ದಾಖಲೆಗಳನ್ನು ಹಿಂದಿರುಗಿಸಬೇಕು ಮತ್ತು ಅರ್ಜಿದಾರರಿಗೆ ಯಾವುದೇ ಬಾಕಿ ಪ್ರಮಾಣಪತ್ರವನ್ನು ನೀಡಬಾರದು ಎಂದು ತೀರ್ಪು ನೀಡಿದೆ.

ಮಗಳು ಇಂಟರ್ನ್‌ಶಿಪ್ ಮಾಡುವಾಗ ತಂದೆ 10 ಲಕ್ಷ ರೂ.ಗಳ ಸಂಪೂರ್ಣ ಸಾಲವನ್ನು ಮರುಪಾವತಿಸಿದ್ದರಿಂದ, ಅವರು ಬಡ್ಡಿಯನ್ನು ಪಾವತಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಶಿಕ್ಷಣ ಸಾಲವನ್ನು ನಿಯಂತ್ರಿಸುವ ನಿಯಮಗಳ ಪ್ರಕಾರ, ವಿದ್ಯಾರ್ಥಿಯು ತನ್ನ ಕೋರ್ಸ್ ಮುಗಿಸಿದ ನಂತರವೇ ಸಾಲದ ಮೊತ್ತಕ್ಕೆ ಕಂತು ಪಾವತಿಸುವುದು ಪ್ರಾರಂಭವಾಗಬೇಕು. ಇಂಟರ್ನ್‌ಶಿಪ್ ಪೂರ್ಣಗೊಳ್ಳುವ ಮೊದಲು ಅರ್ಜಿದಾರನು ಸಾಲದ ಮೊತ್ತವನ್ನು ಮರುಪಾವತಿಸಿದ್ದರಿಂದ ಯಾವುದೇ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ ಎಂದು ಕೋರ್ಟ್​ ತನ್ನ ತೀರ್ಪಿನಲ್ಲಿ ಹೇಳಿದೆ.

Last Updated : Apr 7, 2020, 9:59 PM IST

ABOUT THE AUTHOR

...view details