ಢಾಕಾ: ನವೆಂಬರ್ 3ರಿಂದ ಭಾರತ-ಬಾಂಗ್ಲಾ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಬಾಂಗ್ಲಾ ತಂಡ ನೂತನ ಕೋಚ್ ನೇತೃತ್ವದಲ್ಲಿ ವಿಶೇಷ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾಂಗ್ಲಾದೇಶ ಕ್ರಿಕೆಟಿಗರು ಪ್ರತಿಭಟನೆ ನಡೆಸುತ್ತಿದ್ದ ಕಾರಣ, ಭಾರತ ವಿರುದ್ಧ ಕ್ರಿಕೆಟ್ ಸರಣಿ ನಡೆಯುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ, ಬಿಸಿಬಿ 13 ಬೇಡಿಕೆಗಳಲ್ಲಿ 11ನ್ನು ಈಡೇರಿಸಲು ಒಪ್ಪಿಗೆ ಸೂಚಿರುವ ಕಾರಣ ಕ್ರಿಕೆಟರ್ಸ್ ಪ್ರತಿಭಟನೆ ಹಿಂಪಡೆದುಕೊಂಡಿದ್ದಾರೆ. ಈ ಮೂಲಕ ಭಾರತ ಬಾಂಗ್ಲಾ ಸರಣಿ ನಡೆಯುವುದು ಖಚಿತವಾಗಿದೆ.
ಟೀಂ ಇಂಡಿಯಾ ವಿರುದ್ಧದ ಸರಣಿಗೆ ಬಾಂಗ್ಲಾ ಆಟಗಾರರಿಗೆ ತರಬೇತಿ ಈ ಹಿಂದೆ ತಂಡದ ಬೌಲಿಂಗ್ ಕೋಚ್ ಆಗಿದ್ದ ಭಾರತೀಯ ಸುನಿಲ್ ಜೋಶಿ ಸ್ಥಾನಕ್ಕೆ ಹೊಸದಾಗಿ ಆಯ್ಕೆಗೊಂಡಿರುವ ಡೇನಿಯಲ್ ವೆಟೋರಿ ಅಡಿಯಲ್ಲಿ ತಂಡ ಟ್ರೈನಿಂಗ್ ಪಡೆದುಕೊಳ್ತಿದೆ. ಟಿ-20 ಕ್ಯಾಪ್ಟನ್ ಶಕೀಬ್ ಅಲ್ ಹಸನ್ ಅನಾರೋಗ್ಯದ ಕಾರಣ ತರಬೇತಿ ವೇಳೆ ಕಾಣಿಸಿಕೊಂಡಿಲ್ಲ. ಉಳಿದಂತೆ ಎಲ್ಲಾ ಪ್ಲೇಯರ್ಸ್ಗೆ ಮುಖ್ಯ ಕೋಚ್ ರಸ್ಸೆಲ್ ಡೊಮಿಂಗೊ ಹಾಗೂ ವೆಟೋರಿ ಗೆಲುವಿನ ಮಂತ್ರ ಹೇಳಿಕೊಡುತ್ತಿದ್ದು, ಟೀಂ ಇಂಡಿಯಾ ವಿರುದ್ಧದ ಹೋರಾಟಕ್ಕೆ ತಂಡ ಸಜ್ಜುಗೊಳ್ತಿದೆ.
ಡೆನಿಯಲ್ ವೆಟೋರಿ ಬಾಂಗ್ಲಾ ಕ್ರಿಕೆಟಿಗರ ಅಭ್ಯಾಸ ನವೆಂಬರ್ 3ರಿಂದ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಯಲ್ಲಿ ಮೂರು ಟಿ-20, ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಈಗಾಗಲೇ ಟೀಂ ಇಂಡಿಯಾ ತಂಡ ಪ್ರಕಟಗೊಂಡಿದ್ದು, ಟಿ-20 ತಂಡವನ್ನು ರೋಹಿತ್ ಶರ್ಮಾ ಹಾಗೂ ಟೆಸ್ಟ್ ತಂಡವನ್ನು ಕೊಹ್ಲಿ ಮುನ್ನಡೆಸಲಿದ್ದಾರೆ.