ಕರ್ನಾಟಕ

karnataka

ETV Bharat / bharat

ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣ: ಕಸ್ಟಮ್ ಕೇಸ್​ನಲ್ಲಿ ಸ್ವಪ್ನಾ ಸುರೇಶ್​ಗೆ ಜಾಮೀನು - ಸ್ವಪ್ನಾ ಸುರೇಶ್​ಗೆ ಜಾಮೀನು

ಕೇರಳ ಚಿನ್ನ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ಗೆ ಜಾಮೀನು ದೊರೆತಿದೆ.

Bail for Swapna Suresh in case registered by Customs
ಸ್ವಪ್ನಾ ಸುರೇಶ್​ಗೆ ಜಾಮೀನು

By

Published : Oct 5, 2020, 5:55 PM IST

ಎರ್ನಾಕುಲಂ : ಕೇರಳ ಬಹುಕೋಟಿ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ಗೆ ಜಾಮೀನು ದೊರೆತಿದೆ.

ಕಸ್ಟಮ್ ವಿಭಾಗ ದಾಖಲಿಸಿದ್ದ ಪ್ರಕರಣದಲ್ಲಿ ಸ್ವಪ್ನಾ ಸುರೇಶ್​ಗೆ ಜಾಮೀನು ದೊರೆತಿದೆ. ಆರ್ಥಿಕ ಅಪರಾಧ ಪ್ರಕರಣ ದಾಖಲಿಸಿದ್ದ ಕಸ್ಟಮ್ ಪೊಲೀಸರು 60 ದಿನಗಳಾದರೂ ದೋಷಾರೋಪ ಪಟ್ಟಿ ಸಲ್ಲಿಸದ ಹಿನ್ನೆಲೆ, ಕೊಚ್ಚಿಯ ಎಸಿಜೆಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಸ್ವಪ್ನಾ ಸುರೇಶ್​ ವಿರುದ್ಧ ಎನ್​ಐಎ ದಾಖಲಿಸಿದ ಪ್ರಕರಣದಲ್ಲಿ ಜಾಮೀನು ಸಿಗದ ಕಾರಣ ಕಸ್ಟಮ್ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಸದ್ಯಕ್ಕೆ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ.

ABOUT THE AUTHOR

...view details