ಹರಿದ್ವಾರ(ಉತ್ತರಾಖಂಡ್): ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮುಂತಾದ ಉತ್ತಮ ಸಂಸ್ಥೆಗಳನ್ನು ಕೆಣಕಲು ಪ್ರಯತ್ನಿಸಿದರೆ ಸಹಿಸಲಾಗುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
'ಜೆಎನ್‌ಯು, ಜಾಮಿಯಾ ಅಥವಾ ಇತರೆ ಯಾವುದೇ ಸಂಸ್ಥೆಗಳಾಗಿರಲಿ, ಇವೆಲ್ಲವೂ ತುಂಬಾ ಒಳ್ಳೆಯವು. ಈ ಸಂಸ್ಥೆಗಳ ಹೆಸರು ಕೆಡಿಸಲು ಪ್ರಯತ್ನಿಸುವವರ ಕ್ರಮವನ್ನ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ' ಎಂದು ಪೋಖ್ರಿಯಾಲ್ ಎಚ್ಚರಿಕೆ ನೀಡಿದ್ದಾರೆ.