ಕರ್ನಾಟಕ

karnataka

ETV Bharat / bharat

''ಅರೆ ಓ ಸಾಂಬಾ.. ಗಲೀಜು ಮಾಡಿದ್ರೆ ಪೂರ್ತಿ 500 ರೂಪಾಯಿ ಫೈನ್ ಕಟ್ಟು​!''

ಇತ್ತೀಚೆಗೆ ಹಲವಾರು ರೀತಿಯ ಜಾಹೀರಾತುಗಳು ನಮ್ಮ ಗಮನ ಸೆಳೆಯುತ್ತಿವೆ. ಪಶ್ಚಿಮ ಬಂಗಾಳದ ರೈಲ್ವೆ ನಿಲ್ದಾಣವೊಂದು ವಿಭಿನ್ನ ರೀತಿಯಲ್ಲಿ ಜಾಹೀರಾತು ಪೋಸ್ಟರ್​ಗಳನ್ನು ಅಂಟಿಸುವ ಮೂಲಕ ಪ್ರಯಾಣಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ನಯವಾದ ಎಚ್ಚರಿಕೆಯನ್ನೂ ಕೂಡಾ ನೀಡುತ್ತಿದೆ.

ರೈಲ್ವೆ ಇಲಾಖೆ ಜಾಹೀರಾತು

By

Published : Nov 24, 2019, 4:31 PM IST

ಕೋಲ್ಕತ್ತಾ: 'ಅರೆ ಓ ಸಾಂಬಾ..' ಈ ವಾಕ್ಯ ಕೇಳಿದರೆ ನಮ್ಮ ಕಣ್ಮುಂದೆ ಥಟ್ಟನೆ ನೆನಪಾಗೋದು ಬಾಲಿವುಡ್​ನ ಸುಪ್ರಸಿದ್ಧ ಶೋಲೆ ಸಿನಿಮಾದಲ್ಲಿ ಖಳನಾಯಕ ಗಬ್ಬರ್ ಸಿಂಗ್​​ ಡೈಲಾಗ್​​. ಈ ಸಂಭಾಷಣೆಗೆ ಪಿಧಾ ಆಗದವರೇ ಇಲ್ಲ. 1975ರಲ್ಲಿ ತೆರೆಗೆ ಅಪ್ಪಳಿಸಿದ್ದ ಈ ಸಿನಿಮಾ ಇಂದಿಗೂ ಕೂಡಾ ಜನಮಾನಸದಲ್ಲಿ ತನ್ನದೇ ಸ್ಥಾನವನ್ನು ಉಳಿಸಿಕೊಂಡಿದೆ. ಈಗ ಈ ಸಿನಿಮಾ ಕೂಡಾ ಸೇರಿ ಇನ್ನೂ ಹಲವು ಹಿಂದಿ ಸಿನಿಮಾಗಳ ಪ್ರಸಿದ್ಧ ಡೈಲಾಗ್​ಗಳು ರೈಲ್ವೆ ನಿಲ್ದಾಣವೊಂದರ ಸ್ವಚ್ಛತೆಯನ್ನು ಕಾಪಾಡುವುದಕ್ಕೆ ಬಳಕೆಯಾಗುತ್ತಿವೆ ಅಂದರೆ ಅಚ್ಚರಿಯಾಗುವುದು ಸಹಜ.

ರೈಲ್ವೆ ಇಲಾಖೆ ಜಾಹೀರಾತು

ರೈಲ್ವೆ ನಿಲ್ದಾಣದಲ್ಲಿ ಪೋಸ್ಟರ್​ಗಳನ್ನು ಅಂಟಿಸುವುದು ಕಾನೂನುಬಾಹಿರ. ಆದ್ರೆ ಪಶ್ಚಿಮ ಬಂಗಾಳದಲ್ಲಿರುವ ಅಸಾನ್​ಸೋಲ್​​ ನಲ್ಲಿರೋ ಈ ನಿಲ್ದಾಣದ ಹಲವೆಡೆ ಸಿನಿಮಾದ ಪೋಸ್ಟರ್​​ಗಳು ಕಾಣುತ್ತವೆ. ಸಿನಿಮಾಗಳು ಅಂದ್ರೆ ಇತ್ತೀಚೆಗೆ ಬಿಡುಗಡೆಯಾಗಿರೋ ಅಥವಾ ಬಿಡುಗಡೆಯಾಗಲಿರುವ ಸಿನಿಮಾಗಳ ಪೋಸ್ಟರ್​ಗಳಲ್ಲ. ಅದರ ಬದಲಿಗೆ ಬಾಲಿವುಡ್​ನಲ್ಲಿ ದಶಕಗಳ ಹಿಂದೆ ಹೆಸರು ಮಾಡಿದ್ದ ಸಿನಿಮಾದ ಪೋಸ್ಟರ್​ಗಳು. ಈ ಪೋಸ್ಟರ್​ಗಳನ್ನು ಅಂಟಿಸಿರೋರು ಅಲ್ಲಿನ ರೈಲ್ವೆ ಭದ್ರತಾ ಸಿಬ್ಬಂದಿಯೇ ಅನ್ನೋದು ವಿಶೇಷ.

ಈ ಪೋಸ್ಟರ್​ಗಳನ್ನು ಅಂಟಿಸಿರುವುದು ಅಲ್ಲಿನ ರೈಲ್ವೆ ಪ್ರಯಾಣಿಕರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದರ ಸಲುವಾಗಿ ಅನ್ನೋದು ವಿಶೇಷ. ಇವನ್ನು ನೋಡಿದ್ರೆ ಯಾವುದಾದರೂ ಓರ್ವ ಹೀರೋ ಅಥವಾ ಖ್ಯಾತ ವಿಲನ್ ಕಾಣಿಸುತ್ತಾನೆ. ಆದ್ರೆ ಸರಿಯಾಗಿ ಗಮನಿಸಿದರೆ ಅವುಗಳ ಮೇಲಿನ ಬರಹಗಳು ಆಶ್ಚರ್ಯ ಮೂಡಿಸುವುದರ ಜೊತೆಗೆ ಸ್ವಲ್ಪ ಮಟ್ಟಿಗೆ ಹಾಸ್ಯದ ರೀತಿಯಲ್ಲೂ ಭಾಸವಾಗುತ್ತವೆ.

ರೈಲ್ವೆ ಇಲಾಖೆ ಜಾಹೀರಾತು

'ಅರೆ ಒ ಸಾಂಬಾ ರೈಲ್ವೆ ನಿಲ್ದಾಣದಲ್ಲಿ ಗಲೀಜು ಮಾಡೋದಕ್ಕೆ ಸರ್ಕಾರಕ್ಕೆ ಎಷ್ಟು ದಂಡ ಕಟ್ತಿಯಾ? 500 ರೂಪಾಯಿ, ಪೂರ್ತಿ 500 ರೂಪಾಯಿ' ಅಂತ ಶೋಲೆ ಸಿನಿಮಾದ ಗಬ್ಬರ್ ಸಿಂಗ್​ ಡೈಲಾಗ್ ಅನ್ನು ಒಂದು ಪೋಸ್ಟರ್ ಹೇಳುತ್ತದೆ. ಮತ್ತೊಂದು ಪೋಸ್ಟರ್​ನಲ್ಲಿ ಅಮಿತಾಬ್​ ಬಚ್ಚನ್,​ ಗೋಡೆ ಮೇಲೆ ಉಗುಳಬೇಡಿ ಎಂದು ದೀವಾರ್​ ಸಿನಿಮಾ ಸ್ಟೈಲ್​​ನಲ್ಲಿ ಹೇಳ್ತಾರೆ. ಡೈಲಾಗ್​ ಅಸಾನ್ಸೋಲ್​​ ರೈಲ್ವೆ ನಿಲ್ದಾಣದಲ್ಲಿ ಈವರೆಗೆ 2020 ಮಂದಿಗೆ ದಂಡ ವಿಧಿಸಲಾಗಿದೆ ಎಂದು ಎಚ್ಚರಿಕೆಯನ್ನು ಅದೇ ಪೋಸ್ಟರ್​ನಲ್ಲಿ ನೀಡಲಾಗಿದೆ. ಮತ್ತೊಂದು ಪೋಸ್ಟರ್​ನಲ್ಲಿ ಗಲೀಜು ಮಾಡುವವರನ್ನು ಆರ್​ಪಿಎಫ್​ ಪೊಲೀಸರು ಜೈಲಿಗೆ ಹಾಕುವ ತನಕ ಯಾವುದೂ ಕೂಡಾ ಬದಲಾಗುವುದಿಲ್ಲ ಎಂದು ಖಡಕ್​ ವಾರ್ನಿಂಗ್​ ಅನ್ನು ಸಹ ರೈಲ್ವೆ ಪ್ರಯಾಣಿಕರಿಗೆ ವರ್ಗಾಯಿಸಲಾಗಿದೆ.

2014ರಿಂದ ಈ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಈ ವಿಧಾನವನ್ನು ಅನುಸರಿಸಲಾಗುತ್ತಿದೆ. ಯಾವುದೇ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದ ಹೊರತು ಯಾವುದೇ ಪೋಸ್ಟರ್​ಗಳಿಂದ ಪರಿಪೂರ್ಣ ಪ್ರಯೋಜನವಾಗುವುದು ತುಂಬಾನೇ ಕಡಿಮೆ. ಆದರೂ ಕೂಡಾ ಹೊಸ ರೀತಿಯಲ್ಲಿ ಪ್ರಯಾಣಿಕರನ್ನು ಎಚ್ಚರಿಸೋ ರೈಲ್ವೆ ಸಿಬ್ಬಂದಿ ವಿಧಾನ ನಿತ್ಯ ನೂತನ ಹಾಗೂ ಮೆಚ್ಚುಗೆಗೆ ಅರ್ಹವಾದುದು.

ABOUT THE AUTHOR

...view details