ನವದೆಹಲಿ: ಕರ್ನಾಟಕದ 15 ಶಾಸಕರು ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ಮೂವರು ಸದಸ್ಯರ ಪೀಠ ಸ್ಪೀಕರ್ ಸಾರ್ವಬೌಮ್ಯತೆಯನ್ನ ಎತ್ತಿ ಹಿಡಿದಿದೆ ಎಂದು ಸ್ಪೀಕರ್ ಪರ ವಾದ ಮಂಡನೆ ಮಾಡಿದ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಸ್ಪೀಕರ್ ಘನತೆ ಎತ್ತಿ ಹಿಡಿದಿದೆ: ಅಭಿಷೇಕ್ ಮನು ಸಿಂಘ್ವಿ - ಅಭಿಷೇಕ್ ಮನು ಸಿಂಘ್ವಿ
ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದ್ದು, ಅದರಲ್ಲಿ ಸ್ಪೀಕರ್ ಗೌರವ ಎತ್ತಿ ಹಿಡಿದಿದೆ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಈ ತೀರ್ಪಿನ ಬಗ್ಗೆ ಮಾತನಾಡಿದ ಅವರು,ಈ ಪ್ರಕರಣದಲ್ಲಿ ತಾನು ಮಧ್ಯಸ್ಥಿಕೆ ವಹಿಸುವುದಿಲ್ಲವೆಂದು ಹೇಳಿರುವ ಸುಪ್ರೀಂಕೋರ್ಟ್ ಸ್ಪೀಕರ್ ಹುದ್ದೆಯ ಘನತೆ ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್ನ ಈ ತೀರ್ಪಿನಿಂದಾಗಿ ಅತೃಪ್ತ ಶಾಸಕರು ಹಾಜರಾಗುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಅದರಲ್ಲಿ ನಾನು ಭಾಗಿಯಾಗಲು ಸಾಧ್ಯವಿಲ್ಲ. ಜತೆಗೆ ವಿಪ್ಗೆ ನಾನು ಯಾವುದೇ ರೀತಿಯ ಮಾಹಿತಿ ನೀಡುವುದಿಲ್ಲ ಎಂದು ಇದೇ ವೇಳೆ ತಿಳಿಸಿದರು. ಆದರೆ ಸುಪ್ರೀಂಕೋರ್ಟ್ ತೆಗೆದುಕೊಂಡ ನಿರ್ಧಾರ ಸರಿಯಾಗಿದ್ದು, ಅದರಲ್ಲಿ ನಾವು ಗೆಲುವು ದಾಖಲು ಮಾಡಿದ್ದೇವೆ ಎಂದಿದ್ದಾರೆ.
ನಾಳೆ ವಿಶ್ವಾಸಮತಯಾಚನೆ ನಡೆಯಬಹುದು. ಅದು ಮುಂದೂಡಲುಬಹುದು. ಅದು ಸ್ಪೀಕರ್ ನಿರ್ಧಾರ ಹಾಗೂ ವಿವೇಚನೆಗೆ ಬಿಟ್ಟ ವಿಚಾರ ಎಂದಿರುವ ಅಭಿಷೇಕ್ ಮನು ಸಿಂಘ್ವಿ, ಅತೃಪ್ತ ಶಾಸಕರು ಸದನಕ್ಕೆ ಬರುವಂತೆ ಒತ್ತಡ ಹಾಕುವಂತಿಲ್ಲ ಎಂದು ತ್ರಿ ಸದಸ್ಯ ಪೀಠ ಹೇಳಿದೆ. ಹೀಗಾಗಿ ಎಲ್ಲರೂ ಸಂವಿಧಾನದ ಆಶಯಗಳನ್ನ ಕಾಪಾಡಬೇಕು ಎಂದು ಅವರು ತಿಳಿಸಿದರು.