ನವದೆಹಲಿ : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ ಇದು 'ನಿಸರ್ಗ' ಚಂಡಮಾರುತವಾಗಿ ರೂಪುಗೊಳ್ಳುವ ಭೀತಿ ಎದುರಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯ ಮೂಲಕ ಇದೇ ಜೂನ್ 3 ರಂದು ಚಂಡಮಾರುತ ಹಾದು ಹೋಗುವ ಸಾಧ್ಯತೆ ಇದೆ. ಚಂಡಮಾರುತ ಮಹಾರಾಷ್ಟ್ರದ ಮೂಲಕ ಹಾದುಹೋಗುವಾಗ ಮುಂಬೈ ಮೇಲೆ ತನ್ನ ಪ್ರಭಾವ ಬೀರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
"ಕಡಿಮೆ ಒತ್ತಡ ಪ್ರದೇಶವು ಇಂದು ಬೆಳಗ್ಗೆ ಸೃಷ್ಟಿಯಾಗಿದೆ. ಇದು ಚಂಡಮಾರುತವಾಗಿ ಪರಿವರ್ತಿತವಾಗಲಿದ್ದು ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ತೀರದ ಮೂಲಕ ಜೂನ್ 3ರಂದು ಸಂಜೆ ಅಥವಾ ರಾತ್ರಿ ಹಾದು ಹೋಗಲಿದೆ" ಎಂದು ಹವಾಮಾನ ಇಲಾಖೆ ಟ್ವೀಟ್ ಮಾಡಿದೆ.