ವಿಜಯವಾಡ: ಮುಖ್ಯಮಂತ್ರಿ ಗಾದಿಗೇರಿದ ಬಳಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವತ್ತ ಚಿತ್ತ ಹರಿಸಿರುವ ಆಂಧ್ರದ ನೂತನ ಸಿಎಂ ಜಗನ್ಮೋಹನ ರೆಡ್ಡಿ ಇದೀಗ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಸೇರಿದ ಅಮರಾವತಿ ಮನೆಯನ್ನು ತೆರವುಗೊಳಿಸಲು ಆದೇಶಿಸಿದ್ದು ಸದ್ಯ ಅಧಿಕಾರಿಗಳು ಏಳು ದಿನದೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಅಕ್ರಮವಾಗಿ ಕಟ್ಟಲಾಯ್ತೇ ನಾಯ್ಡು ನಿವಾಸ..? ಮನೆ ತೆರವಿಗೆ ನೋಟಿಸ್ ಜಾರಿ
ಜಗನ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ನಾಯ್ಡು ಮನೆಗೆ ಆಗಮಿಸಿ, ಆದೇಶ ಪ್ರತಿ ನೀಡಿ ಮನೆ ತೆರವುಗೊಳಿಸುವಂತೆ ಸೂಚಿಸಿದ್ದಾರೆ.
ಜಗನ್ ಆದೇಶದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ನಾಯ್ಡು ಮನೆಗೆ ಆಗಮಿಸಿ, ಆದೇಶ ಪ್ರತಿ ನೀಡಿ ಮನೆ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಅಮರಾವತಿಯ ಕೃಷ್ಣ ನದಿಯ ಸಮೀಪದಲ್ಲಿ ಕಟ್ಟಿರುವ ಮನೆ ಅಕ್ರಮ ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತೆಲುಗು ದೇಶಂ ಪಾರ್ಟಿ ನಾಯಕರು ಈಗಾಗಲೇ ಚಂದ್ರಬಾಬು ನಾಯ್ಡರಿಗೆ ತಾತ್ಕಾಲಿಕ ಮನೆಯ ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಎಂಟು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಪ್ರಜಾ ವೇದಿಕಾ ಕಟ್ಟಡ ಅಕ್ರಮವಾಗಿ ಕಟ್ಟಲಾಗಿದೆ ಎಂದು ದಾಖಲೆ ಸಮೇತ ವಿವರ ನೀಡಿದ್ದ ಸಿಎಂ ಜಗನ್ ಎರಡು ದಿನಗಳಲ್ಲಿ ನೆಲಸಮ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.