ನವದೆಹಲಿ:ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪಿಯೂಷ್ ಗೋಯಲ್ ವಂದೇ ಭಾರತ್ ಎಕ್ಸ್ಪ್ರೆಸ್ ನೂತನ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.
ಇದೇ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಮೇಡ್ ಇನ್ ಇಂಡಿಯಾ ಅಡಿ ನಿರ್ಮಾಣವಾಗಿರುವ ಈ ರೈಲು ಲೋಕಾರ್ಪಣೆ ಗೊಳಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಸೇವೆ ದೃಷ್ಟಿಯಲ್ಲಿ ಇಟ್ಟುಕೊಂಡು ರೈಲ್ವೆ ಇಲಾಖೆ ವೇಗವಾಗಿ ಗಣನೀಯ ಸಾಧನೆ ಮಾಡುತ್ತಿದೆ ಎಂದು ರೈಲ್ವೆ ಇಲಾಖೆ ಕಾರ್ಯವನ್ನ ಶ್ಲಾಘಿಸಿದ್ದಾರೆ.
ನವದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರದ ಕಟ್ರಾ ಜಿಲ್ಲೆಗೆ ಸಂಪರ್ಕಿಸುವ ಈ ರೈಲು ಶನಿವಾರದಿಂದ ಮೊದಲ ಸಂಚಾರ ಆರಂಭಿಸಲಿದೆ. ಈಗಾಗಲೆ ಬುಕ್ಕಿಂಗ್ ಕೂಡ ಪ್ರಾರಂಭವಾಗಿದೆ. ಮಂಗಳವಾರ ಹೊರತು ಪಡಿಸಿ ವಾರದ 6 ದಿನಗಳ ಕಾಲ ಈ ರೈಲು ಸಂಚರಿಸಲಿದೆ. ಈ ರೈಲಿನಿಂದ ನವದೆಹಲಿಯಿಂದ ಕಟ್ರಾಗೆ ತಲುಪಲು ಈ ಮೊದಲಿಗಿಂತ 4 ಗಂಟೆಗಳ ಸಮಯ ಉಳಿತಾಯವಾಗಲಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಚಿವ ಸುರೇಶ್ ಅಂಗಡಿ
ಇನ್ನು ರೈಲ್ವೇ ಸಚಿವ ಸುರೇಶ್ ಅಂಗಡಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಏರಿ ಪರಿಶೀಲನೆ ನಡೆಸಿದ್ದಾರೆ.