ಕರ್ನಾಟಕ

karnataka

ETV Bharat / bharat

ಉದ್ಯೋಗ ಸೃಷ್ಟಿ:  20 ಸಾವಿರ ಹುದ್ದೆಗಳ ನೇಮಕಕ್ಕೆ ಅಮೆಜಾನ್​ ಇಂಡಿಯಾ ಸಜ್ಜು

ಆನ್​ಲೈನ್​ ಶಾಪಿಂಗ್​ಗೆ ಮುಂದಿನ ಆರು ತಿಂಗಳಲ್ಲಿ ಹೆಚ್ಚು ಬೇಡಿಕೆ ಬರಲಿದ್ದು, ಅಮೆಜಾನ್​ ಇಂಡಿಯಾ ಇ - ಕಾಮರ್ಸ್​ ಸಂಸ್ಥೆ 20 ಸಾವಿರ ತಾತ್ಕಾಲಿಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

Amazon India
ಅಮೆಜಾನ್​ ಇಂಡಿಯಾ

By

Published : Jun 29, 2020, 10:55 AM IST

ನವದೆಹಲಿ:ಪ್ರಸಿದ್ಧ ಇ ಕಾಮರ್ಸ್​ ಉದ್ಯಮ ಅಮೆಜಾನ್​ ಇಂಡಿಯಾ ಕಂಪನಿ ತನ್ನ ಗ್ರಾಹಕ ಸೇವಾ ವಿಭಾಗದಲ್ಲಿ ಸುಮಾರು 20 ಸಾವಿರ ತಾತ್ಕಾಲಿಕ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎಂದು ಭಾನುವಾರ ಸ್ಪಷ್ಟಪಡಿಸಿದೆ.

ಮುಂದಿನ ಆರು ತಿಂಗಳಲ್ಲಿ ಗ್ರಾಹಕ ಸೇವೆಗೆ ಹೆಚ್ಚಿನ ಬೇಡಿಕೆ ಬರಲಿದ್ದು, ಇವುಗಳಿಗೆ ತಾತ್ಕಾಲಿಕ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಹೈದರಾಬಾದ್​, ಪುಣೆ, ನೋಯ್ಡಾ, ಕೊಯಮತ್ತೂರು, ಕೋಲ್ಕತ್ತಾ, ಮಂಗಳೂರು, ಇಂಧೋರ್​, ಭೋಪಾಲ್​, ಲಖನೌಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಇದರಲ್ಲಿ ಅತಿ ಹೆಚ್ಚು ನೇಮಕಾತಿಗಳು ವರ್ಚುವಲ್ ಕಸ್ಟಮರ್ ಕೇರ್ ವಿಭಾಗದಲ್ಲಿ ನಡೆಯಲಿದ್ದು, ವರ್ಕ್​ ಫ್ರಂ ಹೋಮ್​ ಆಯ್ಕೆಯನ್ನೂ ಹೊಂದಿರುತ್ತವೆ ಎಂದು ಅಮೆಜಾನ್​ ಇಂಡಿಯಾ ಉಲ್ಲೇಖಿಸಿದೆ.

ಇ-ಮೇಲ್​, ಚಾಟ್​, ಸೋಷಿಯಲ್​ ಮೀಡಿಯಾ, ಫೋನ್​ ಮೂಲಕ ಗ್ರಾಹಕ ಸೇವೆಯನ್ನು ಒದಗಿಸಲಾಗುತ್ತದೆ. ಕನಿಷ್ಠ ಪಿಯುಸಿ ವಿದ್ಯಾಹರ್ತೆಯುಳ್ಳ ಇಂಗ್ಲಿಷ್​, ಕನ್ನಡ, ಹಿಂದಿ, ತಮಿಳು, ತೆಲುಗು ಭಾಷಗಳಲ್ಲಿ ಹಿಡಿತ ಹೊಂದಿರುವವರನ್ನು ನೇಮಿಸಿಕೊಳ್ಳಲಾಗುತ್ತದೆ.

ಉದ್ಯೋಗಿಗಳ ಸಾಮರ್ಥ್ಯ ಹಾಗೂ ದಕ್ಷತೆಯನ್ನು ಆಧರಿಸಿ ತಾತ್ಕಾಲಿಕವಾದ ಅವರ ಹುದ್ದೆಗಳನ್ನು ಕಾಯಂಗೊಳಿಸಲಾಗುತ್ತದೆ. ಗ್ರಾಹಕ ಸೇವೆಗೆ ಹೆಚ್ಚಿನ ಬೇಡಿಕೆ ಇದ್ದು, ಮುಂದಿನ ಆರು ತಿಂಗಳಿಗೆ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅಮೆಜಾನ್​ ಇಂಡಿಯಾದ ಗ್ರಾಹಕ ಸೇವಾ ವಿಭಾಗದ ನಿರ್ದೇಶಕ ಅಕ್ಷಯ್​ ಪ್ರಭು ಸ್ಪಷ್ಟನೆ ನೀಡಿದ್ದಾರೆ.

ಇದಕ್ಕೂ ಮೊದಲು ದೇಶದಲ್ಲಿ 2025ರ ವೇಳೆಗೆ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಅಮೆಜಾನ್​ ಇಂಡಿಯಾ ಹೇಳಿಕೊಂಡಿತ್ತು. ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್​ ವಿಭಾಗದಲ್ಲಿ ಹೂಡಿಕೆ ಕೂಡಾ ಮಾಡಿತ್ತು. ಈ ಹೂಡಿಕೆಗಳಿಂದ ಏಳು ಲಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿ ಹೇಳಿಕೊಂಡಿತ್ತು. ಕೊರೊನಾ ವೈರಸ್ ಲಾಕ್​ಡೌನ್​ನಿಂದ ಆನ್​ಲೈನ್​ ಶಾಪಿಂಗ್​ ಹೆಚ್ಚಾಗಲಿದ್ದು, ಈಗ 20 ಸಾವಿರ ಮಂದಿಯನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ABOUT THE AUTHOR

...view details