ಮುಂಬೈ :ಸಾಂಕ್ರಾಮಿಕಕೊರೊನಾ ವೈರಸ್ ವಿರುದ್ಧ ಸೆಣಸುತ್ತಾ ಜನರ ಜೀವ ಉಳಿಸಲು ಶ್ರಮಿಸುತ್ತಿರುವ ವೈದ್ಯ ಸಮುದಾಯಕ್ಕೆ ಶುಲ್ಕ ವಿಧಿಸದೆ 50,000 ಸೀಟುಗಳನ್ನು ನೀಡುವುದಾಗಿ ನೋ-ಫ್ರಿಲ್ಸ್ ವಿಮಾನಯಾನ ಏರ್‌ಏಷ್ಯಾ ಇಂಡಿಯಾ ತಿಳಿಸಿದೆ.
ನಮ್ಮ ವೈದ್ಯರಿಗೆ ಗೌರವದ ಸಂಕೇತವಾಗಿ ಮತ್ತು ಕಳೆದ ಕೆಲವು ತಿಂಗಳುಗಳಿಂದ ಅವರ ಪ್ರಶಂಸನೀಯ ಮೌಲ್ಯಗಳನ್ನು ಗುರುತಿಸಿ, ರಾಷ್ಟ್ರವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ದಣಿವರಿಯದ ಪ್ರಯತ್ನಗಳಿಗೆ ನಮ್ಮ ಕೃತಜ್ಞತೆ ವ್ಯಕ್ತಪಡಿಸಲು ಬಯಸಿದ್ದೇವೆ ಎಂದು ಏರ್‌ಏಷ್ಯಾ ಇಂಡಿಯಾ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗರ್ಗ್ ಹೇಳಿದರು.