ನವದೆಹಲಿ:ವಾಯುಮಾಲಿನ್ಯದಿಂದಾಗಿ ಮತ್ತು ವಾಯು ಗುಣಮಟ್ಟ ಕ್ಷೀಣಿಸಿರುವುದರಿಂದಾಗಿ ಜನರ ಜೀವನಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ.
ಗಾಳಿಗೇ ‘ಗಾಳಿ’ ಹಿಡಿದ ಹೊತ್ತು !
ವಾಯುಮಾಲಿನ್ಯದಿಂದಾಗಿ ಮತ್ತು ವಾಯು ಗುಣಮಟ್ಟ ಕ್ಷೀಣಿಸಿರುವುದರಿಂದಾಗಿ ಜನರ ಜೀವನಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಈಗಿನ ಪರಿಸ್ಥಿತಿ ಇದಕ್ಕೆ ಸಾಕ್ಷಿ.ನೈಸರ್ಗಿಕ ಸಂಪನ್ಮೂಲಗಳನ್ನು ಮನುಷ್ಯರು ಎಗ್ಗಿಲ್ಲದೆ ಬಳಸುತ್ತಿರುವುದರಿಂದಾಗಿ ಪರಿಸರ ಗಂಭೀರ ಸ್ಥಿತಿಗೆ ತಲುಪಿದೆ. 153ದೇಶಗಳು ಮತ್ತು11,258ವಿಜ್ಞಾನಿಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಸಮಿತಿ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿತು.ಅಕಾಲಿಕ ಮಳೆ,ಪ್ರವಾಹ,ಅನಾವೃಷ್ಟಿ,ಭೂಕಂಪ,ಸುನಾಮಿ,ಜಾಗತಿಕ ತಾಪಮಾನ ಹೆಚ್ಚಳ,ಹಿಮನದಿಗಳ ಕ್ಷಿಪ್ರ ಕರಗುವಿಕೆ,ಸಮುದ್ರ ಮಟ್ಟದ ಏರಿಕೆ ಪರಿಸರದ ಮೇಲೆ ತೀವ್ರ ಮಾರಕ ಪರಿಣಾಮ ಉಂಟು ಮಾಡುತ್ತಿವೆ.ಕೈಗಾರಿಕರಣ,ನಗರೀಕರಣ ಮತ್ತು ಅಭಿವೃದ್ಧಿಯ ಸೋಗಿನಲ್ಲಿ ನಡೆಯುತ್ತಿರುವ ಅರಣ್ಯನಾಶ ಪ್ರಕೃತಿಯ ಸಮತೋಲನ ಭಂಗಗೊಳಿಸುತ್ತಿದೆ.ನಾಗರಿಕತೆಯ ಆರಂಭದ ದಿನಗಳಲ್ಲಿ,ಮನುಷ್ಯ ಬೇಟೆಗಾರನಾಗಿದ್ದ.ಮಾನವ ಜನಾಂಗದ ಬೆಳವಣಿಗೆಯ ಹಾದಿಯಲ್ಲಿ,ಮನುಷ್ಯ ತನ್ನ ಅಗತ್ಯಗಳಿಗಾಗಿ ಪ್ರಕೃತಿಯನ್ನು ನಾಶಮಾಡಲು ಪ್ರಾರಂಭಿಸಿದ.ಹಸಿರುಮನೆ ಪರಿಣಾಮ ಬೀರುವ ಅನಿಲಗಳನ್ನು ಮನಸೋ ಇಚ್ಛೆ ಪರಿಸರಕ್ಕೆ ಬಿಡುಗಡೆ ಮಾಡುತ್ತಿರುವುದರಿಂದ ಗಾಳಿ,ನೀರು ಹಾಗೂ ಆಹಾರ ಕಲುಷಿತಗೊಳ್ಳುತ್ತಿದೆ.
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದ ವಾತಾವರಣ ಅಪಾಯದ ಮಟ್ಟ ಮೀರಿದ್ದು ವಾಯು ಗುಣಮಟ್ಟ ಸೂಚ್ಯಂಕ(ಎ ಕ್ಯೂ ಐ)ಎಚ್ಚರಿಕೆ ಗಂಟೆ ಬಾರಿಸುತ್ತಿವೆ.ಮಾಲಿನ್ಯಕ್ಕೆ ಸಂಬಂಧಿಸಿದಂತೆ ಭೌಗೋಳಿಕ ಪರಿಸ್ಥಿತಿ ಸಣ್ಣ ಪಾತ್ರ ನಿರ್ವಹಿಸಿದರೂ ಮಾನವನಿಂದ ಸೃಷ್ಟಿಯಾದ ಸಮಸ್ಯೆಗಳು ಈ ಭೀತಿಗೆ ಪ್ರಮುಖ ಕಾರಣ.ದೀಪಾವಳಿ ಪಟಾಕಿ ಮತ್ತು ಕೊಯ್ದ ಪೈರಿನ ಕೂಳೆಯನ್ನು ಸುಡುವುದರಿಂದಾಗಿ ದೆಹಲಿಯಲ್ಲಿ ಎ ಕ್ಯೂ ಐ500-ಪಾಯಿಂಟ್ ದಾಖಲಾಗಿದ್ದು ಇದು ಅಪಾಯಕಾರಿ.ಎಕ್ಯೂಐ400ರಿಂದ500ರ ನಡುವೆ ಇದ್ದರೆ ಅದನ್ನು ವಿಪತ್ತು ಎಂದು ಪರಿಗಣಿಸಲಾಗುತ್ತದೆ. 500ಕ್ಕಿಂತ ಹೆಚ್ಚಿನ ಎಕ್ಯೂಐ ಭಾರಿ ಗಂಡಾಂತರಕಾರಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿದ್ದು,ದೆಹಲಿಯಲ್ಲಿ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ.ಮುಖಗವಸು ಇಲ್ಲದೆ ಜನರು ಹೊರಹೋಗುತ್ತಿಲ್ಲ,ಇದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿ.ದೆಹಲಿ ಮಾತ್ರವಲ್ಲ ಗುರುಗ್ರಾಮ,ಘಾಜಿಯಾಬಾದ್,ನೋಯ್ಡಾ,ಫರೀದಾಬಾದ್ ಕೂಡ ವಾಯುಮಾಲಿನ್ಯದಿಂದ ಬಳಲುತ್ತಿವೆ.ಮಹಾರಾಷ್ಟ್ರ,ಒಡಿಶಾ,ಛತ್ತೀಸಗಡ ಮತ್ತು ತೆಲಂಗಾಣ ರಾಜ್ಯಗಳಲ್ಲೂ ವಿಷಕಾರಿ ಅನಿಲಗಳ ಅಪಾಯ ಇದೆ.ಈಗಾಗಲೇ ಹೆಚ್ಚಿರುವ ಮಾಲಿನ್ಯವನ್ನು ಹವಾಮಾನ ಬದಲಾವಣೆ ಮತ್ತಷ್ಟು ಹದಗೆಡಿಸುತ್ತಿದೆ.ಚಳಿಗಾಲದ ಮಂಜಿನ ಜೊತೆಗೆ,ವಾಹನಗಳು,ಕೈಗಾರಿಕೆಗಳು ಹಾಗೂ ಹೊಲಗಳಿಂದ ಏಳುವ ಹೊಗೆ ಜನರ ಉಸಿರುಗಟ್ಟಿಸುತ್ತಿದೆ.ದೆಹಲಿ ಪಕ್ಕದ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕೃಷಿ ಸಾಕಷ್ಟು ಅಭಿವೃದ್ಧಿ ಕಂಡಿದೆ.ಈ ಎರಡು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗುತ್ತದೆ.ಹಾಗಾಗಿ ಅಧಿಕ ಮಟ್ಟದಲ್ಲಿ ಹುಲ್ಲನ್ನು ಸುಡಲಾಗುತ್ತದೆ.ಸಾಮಾನ್ಯವಾಗಿ,ಒಂದು ಟನ್ ಹುಲ್ಲು ಸುಡುವುದರಿಂದ60ಕಿಲೋಗ್ರಾಂಗಳಷ್ಟು ಇಂಗಾಲದ ಮಾನಾಕ್ಸೈಡ್ ಮತ್ತು1,400ಕಿಲೋಗ್ರಾಂಗಳಷ್ಟು ಇಂಗಾಲದ ಡೈ ಆಕ್ಸೈಡ್ ಹೊರಸೂಸುತ್ತದೆ. 3ಕಿಲೋಗ್ರಾಂಗಳಷ್ಟು ಸೂಕ್ಷ್ಮ ಧೂಳಿನ ಕಣಗಳು,ಬೂದಿ ಹಾಗೂ ಸಲ್ಫರ್ ಡೈ ಆಕ್ಸೈಡ್ ಹೆಚ್ಚುವರಿಯಾಗಿ ಪರಿಸರಕ್ಕೆ ಸೇರ್ಪಡೆಯಾಗುತ್ತವೆ.ಪ್ರತಿವರ್ಷ ಹೀಗೆ ಸುಡಲಾಗುವ ಅರ್ಧದಷ್ಟು ಕೂಳೆ ಪಂಜಾಬ್,ಹರಿಯಾಣ ಹಾಗೂ ಉತ್ತರ ಪ್ರದೇಶಕ್ಕೆ ಸೇರಿದ್ದು,ಇದು ದೆಹಲಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಚಳಿಗಾಲದ ಅವಧಿಯಲ್ಲಿ ಇದರ ಪರಿಣಾಮ ದುಪ್ಪಟ್ಟಾಗಿರುತ್ತದೆ.
ಬೆಳೆ ಸುಡುವುದರಿಂದ ಭೂಮಿಯ ಫಲವತ್ತತೆ ಇಳಿಮುಖವಾಗುತ್ತಿದೆ.ಅವೈಜ್ಞಾನಿಕವಾಗಿ ಬೆಳೆ ದಹನ ಮಾಡುವುದರಿಂದ ಪ್ರಯೋಜನಕಾರಿ ಸೂಕ್ಷ್ಮಾಣುಜೀವಿಗಳು ನಾಶವಾಗುತ್ತಿವೆ.ಭೂಮಿಯಲ್ಲಿ ತೇವಾಂಶ ಕಡಿಮೆಯಾಗುತ್ತಿದ್ದು,ಇಳುವರಿ ಕುಸಿಯುತ್ತಿದೆ.ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಾಲ್ಕು ವರ್ಷಗಳ ಹಿಂದೆ ಹುಲ್ಲು ಸುಡುವುದರ ವಿರುದ್ಧ ಸೂಚನೆ ನೀಡಿದ್ದರೂ,ಯಾರೂ ಅದನ್ನು ಗಮನಿಸಲಿಲ್ಲ.ಹೀಗಾಗಿ ಪರಿಸರ ನಾಶದ ಜೊತೆಗೆ,ಜಾಗತಿಕ ತಾಪಮಾನ ಹೆಚ್ಚಾಗುತ್ತದೆ.ಅಲ್ಲದೆ ವಾಯುಮಾಲಿನ್ಯದ ಸ್ಥಿತಿ ವಿಕೋಪಕ್ಕೆ ಹೋಗಲಿದೆ.ದೇಶದೆಲ್ಲೆಡೆ ವಾಯು ಪ್ರಕೋಪದಿಂದಾಗಿ ಸಂಭವಿಸುವ ಸಾವುಗಳಲ್ಲಿ ಶೇಕಡಾ23ರಷ್ಟು ಏರಿಕೆಯಾಗಿದೆ.ಕಲುಷಿತ ಗಾಳಿಯಿಂದಾಗಿ8ಜನರಲ್ಲಿ ಒಬ್ಬರು ಸಾಯುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ವರದಿಗಳು ಸ್ಪಷ್ಟವಾಗಿ ತಿಳಿಸಿವೆ.ಗಾಳಿಯ ಗುಣಮಟ್ಟದಲ್ಲಿ ಧಕ್ಕೆಯುಂಟಾಗಿರುವ ದೆಹಲಿಯಂತಹ ಸ್ಥಳಗಳಲ್ಲಿ ಶ್ವಾಸಕೋಶ ಮತ್ತು ಹೃದಯ ಕಾಯಿಲೆಗಳು ಹೆಚ್ಚಾಗಲಿವೆ ಎಂದು ಏಮ್ಸ್ ಎಚ್ಚರಿಸಿದೆ.ಎಕ್ಯೂಐ ಕುರಿತು ಸಮೀಕ್ಷೆ ನಡೆಸಿದ180ದೇಶಗಳಲ್ಲಿ ಭಾರತ ಕೊನೆಯ ಸ್ಥಾನದಲ್ಲಿದೆ.ಮೂರನೇ ಎರಡರಷ್ಟು ಭಾರತೀಯ ನಗರಗಳು ಗ್ಯಾಸ್ ಚೇಂಬರುಗಳಾಗಿ ಮಾರ್ಪಟ್ಟಿವೆ.
ಇಂತಹ ‘ಬೆಳೆಯುಳಿಕೆ’ಗಳನ್ನು ಸುಡುವ ಬದಲು,ಪರ್ಯಾಯ ವಿಧಾನಗಳನ್ನು ಜಾರಿಗೆ ತರುವುದು ಅವಶ್ಯ.ಸಾಂಪ್ರದಾಯಿಕ ಇಂಧನ ವ್ಯವಸ್ಥೆಗಳಲ್ಲಿ ಬೆಳೆಯುಳಿಕೆಗಳನ್ನು ಇಂಧನವಾಗಿ ಬಳಸುವುದರಿಂದ ವ್ಯರ್ಥವಾಗಿ ಸುಡುವ ಪ್ರಮಾಣ ಕಡಿಮೆ ಮಾಡಬಹುದು.ಗಾಳಿಯ ಗುಣಮಟ್ಟ ಹದಗೆಟ್ಟಿರುವ ಸ್ಥಳಗಳಲ್ಲಿ ಭತ್ತ ಮತ್ತು ಗೋಧಿಯ ಬದಲು ರಾಗಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕು.ದೆಹಲಿಯ ವಾಹನಗಳ ಮಾಲಿನ್ಯ ತಡೆಯಲು,ಸಮ-ಬೆಸ ವ್ಯವಸ್ಥೆಗಿಂತ ಹೆಚ್ಚು ಪರಿಣಾಮಕಾರಿ ವಿಧಾನಗಳನ್ನು ಪರಿಗಣಿಸಬೇಕು.ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು.ವಿಷಕಾರಿ ತ್ಯಾಜ್ಯ ಹೊರಸೂಸುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಮಾಲಿನ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಬೇಕು.ಆಸ್ಟ್ರೇಲಿಯಾ,ಬಾರ್ಬಡೋಸ್ ಹಾಗೂ ಕೆನಡಾದಂತಹ ರಾಷ್ಟ್ರಗಳಲ್ಲಿ ಎ ಕ್ಯೂ ಐ ಅತ್ಯುತ್ತಮವಾಗಿದೆ.ಭಾರತ ಅಂತಹ ದೇಶಗಳ ನಡೆ ಅನುಸರಿಸಿ ಅಗತ್ಯ ಕ್ರಮಗಳ ಅನುಷ್ಠಾನಕ್ಕೆ ಮುಂದಾಗಬೇಕು.
ವಾಯುಮಾಲಿನ್ಯದಿಂದಾಗಿ ಮತ್ತು ವಾಯು ಗುಣಮಟ್ಟ ಕ್ಷೀಣಿಸಿರುವುದರಿಂದಾಗಿ ಜನರ ಜೀವನಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ.ರಾಷ್ಟ್ರ ರಾಜಧಾನಿ ದೆಹಲಿಯ ಈಗಿನ ಪರಿಸ್ಥಿತಿ ಇದಕ್ಕೆ ಸಾಕ್ಷಿ.ನೈಸರ್ಗಿಕ ಸಂಪನ್ಮೂಲಗಳನ್ನು ಮನುಷ್ಯರು ಎಗ್ಗಿಲ್ಲದೆ ಬಳಸುತ್ತಿರುವುದರಿಂದಾಗಿ ಪರಿಸರ ಗಂಭೀರ ಸ್ಥಿತಿಗೆ ತಲುಪಿದೆ. 153ದೇಶಗಳು ಮತ್ತು11,258ವಿಜ್ಞಾನಿಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಸಮಿತಿ ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿತು.ಅಕಾಲಿಕ ಮಳೆ,ಪ್ರವಾಹ,ಅನಾವೃಷ್ಟಿ,ಭೂಕಂಪ,ಸುನಾಮಿ,ಜಾಗತಿಕ ತಾಪಮಾನ ಹೆಚ್ಚಳ,ಹಿಮನದಿಗಳ ಕ್ಷಿಪ್ರ ಕರಗುವಿಕೆ,ಸಮುದ್ರ ಮಟ್ಟದ ಏರಿಕೆ ಪರಿಸರದ ಮೇಲೆ ತೀವ್ರ ಮಾರಕ ಪರಿಣಾಮ ಉಂಟು ಮಾಡುತ್ತಿವೆ.ಕೈಗಾರಿಕೀಕರಣ,ನಗರೀಕರಣ ಮತ್ತು ಅಭಿವೃದ್ಧಿಯ ಸೋಗಿನಲ್ಲಿ ನಡೆಯುತ್ತಿರುವ ಅರಣ್ಯನಾಶ ಪ್ರಕೃತಿಯ ಸಮತೋಲನ ಭಂಗಗೊಳಿಸುತ್ತಿದೆ.ನಾಗರಿಕತೆಯ ಆರಂಭದ ದಿನಗಳಲ್ಲಿ,ಮನುಷ್ಯ ಬೇಟೆಗಾರನಾಗಿದ್ದ.ಮಾನವ ಜನಾಂಗದ ಬೆಳವಣಿಗೆಯ ಹಾದಿಯಲ್ಲಿ,ಮನುಷ್ಯ ತನ್ನ ಅಗತ್ಯಗಳಿಗಾಗಿ ಪ್ರಕೃತಿಯನ್ನು ನಾಶಮಾಡಲು ಪ್ರಾರಂಭಿಸಿದ.ಹಸಿರುಮನೆ ಪರಿಣಾಮ ಬೀರುವ ಅನಿಲಗಳನ್ನು ಮನಸೋ ಇಚ್ಛೆ ಪರಿಸರಕ್ಕೆ ಬಿಡುಗಡೆ ಮಾಡುತ್ತಿರುವುದರಿಂದ ಗಾಳಿ,ನೀರು ಹಾಗೂ ಆಹಾರ ಕಲುಷಿತಗೊಳ್ಳುತ್ತಿದೆ.