ಕರ್ನಾಟಕ

karnataka

ETV Bharat / bharat

ಕೋವಿಡ್ ಲಸಿಕೆ ಸಾಗಾಟಕ್ಕೆ ಸಜ್ಜಾಗುತ್ತಿವೆ ಭಾರತದ ವಿಮಾನ ನಿಲ್ದಾಣಗಳು!

ಭಾರತದಲ್ಲಿ ಕೊರೊನಾ ಲಸಿಕೆ ಮುಂದಿನ ವರ್ಷದ ಆರಂಭದಲ್ಲಿ ಸಿಗುವ ಸಾಧ್ಯತೆಯಿದ್ದು, ಲಸಿಕೆಯ ಸಾಗಣೆಗಾಗಿ ಭಾರತದ ವಿಮಾನ ನಿಲ್ದಾಣಗಳು ಸಜ್ಜಾಗುತ್ತಿವೆ.

corona vaccine
ಕೊರೊನಾ ಲಸಿಕೆ

By

Published : Nov 22, 2020, 4:20 PM IST

ನವದೆಹಲಿ: ಕೊರೊನಾ ವ್ಯಾಕ್ಸಿನ್ ಅನ್ನು ಸುರಕ್ಷಿತವಾಗಿ ಭಾರತಕ್ಕೆ ತರುವ ಸಲುವಾಗಿ ಪ್ರಮುಖ ವಿಮಾನ ನಿಲ್ದಾಣಗಳು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು, ಪ್ರತ್ಯೇಕ ಕೊಠಡಿಗಳು, ತಾಪಮಾನ ನಿಯಂತ್ರಣ ವಲಯಗಳನ್ನು ಒದಗಿಸಲು ತಯಾರಿ ನಡೆಸುತ್ತಿವೆ.

ಮುಂದಿನ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ಭಾರತಕ್ಕೆ ಬರುವ ಸಾಧ್ಯತೆಯಿದ್ದು, ಈಗಾಗಲೇ ಪ್ರಮುಖ ಲಸಿಕೆ ತಯಾರಿಸುತ್ತಿರುವ ಔಷಧ ಕಂಪನಿಗಳೊಂದಿಗೆ ಭಾರತ ಸರ್ಕಾರ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ತಯಾರಿಯನ್ನು ನಡೆಸಿಕೊಳ್ಳುತ್ತಿದೆ.

ಈಗ ಸದ್ಯಕ್ಕೆ ಮೊಡೆರ್ನಾ, ಫೈಜರ್, ಸೀರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ, ಭಾರತ ಬಯೋಟೆಕ್. ಝೈಡಸ್ ಕ್ಯಾಡಿಲಾ ಔಷಧ ಕಂಪನಿಗಳು ಕೊರೊನಾ ಲಸಿಕೆಯ ಪ್ರಯೋಗಗಳು ವಿವಿಧ ಹಂತಗಳಲ್ಲಿ ನಡೆಯುತ್ತಿದೆ.

ವಿದೇಶಗಳಲ್ಲಿ ತಯಾರಾದ ಲಸಿಕೆಯನ್ನು ಭಾರತಕ್ಕೆ ತರುವ ವೇಳೆ ಮತ್ತು ದೇಶೀಯವಾಗಿ ಲಸಿಕೆ ತಯಾರಾದರೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸುವ ಕಾರಣದಿಂದ ವಿಮಾನ ನಿಲ್ದಾಣಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಅತಿ ದೊಡ್ಡ ಔಷಧ ರಫ್ತು ಆಮದು ಸ್ಥಳವಾಗಿದ್ದು, ಕೊರೊನಾ ಲಸಿಕೆಯನ್ನು ಹೊರದೇಶಗಳಿಂದ ತರಬೇಕಾದರೆ ಅಥವಾ ಬೇರೆಡೆಗೆ ಸಾಗಿಸಬೇಕಾದರೆ ಬೇಕಾಗುವ ವಾತಾವರಣವನ್ನು ಕಲ್ಪಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರ ತಿಳಿಸಿದ್ದಾರೆ.

ಇದಕ್ಕಾಗಿ ವಿಮಾನ ನಿಲ್ದಾಣವನ್ನ ದಿನದ ಎಲ್ಲಾ ವೇಳೆಯಲ್ಲೂ ಕಾರ್ಯ ನಿರ್ವಹಣೆ ಮಾಡುವ ಟ್ರಕ್​​ಗಳನ್ನು ಇಡಲಾಗಿದೆ. ಇದರ ಜೊತೆಗೆ ಎಕ್ಸ್​ ರೇ ಯಂತ್ರಗಳು, ಯುಎಲ್​ಡಿ (ಯುನಿಟ್ ಲೋಡ್ ಡಿವೈಸ್)ಗಳನ್ನು ಅಳವಡಿಸಿಕೊಳ್ಳಲಾಗಿದೆ.

ವಿಮಾನ ಸರಕು ಸಾಗಣೆ ಕಂಪನಿಯಾದ ಬ್ಲೂ ಡಾರ್ಟ್​​ ಆರು ಬೋಯಿಂಗ್-757 ವಿಮಾನಗಳನ್ನು ಹೊಂದಿದ್ದು, ಮುಂಬೈ, ಚೆನ್ನೈ, ಹೈದರಾಬಾದ್, ಅಹಮದಾಬಾದ್, ಪುಣೆ, ಕೋಲ್ಕತಾ, ದೆಹಲಿ, ಬೆಂಗಳೂರಿನಲ್ಲಿ ಔಷಧಗಳನ್ನು ಸಂಗ್ರಹಿಸಲು ಅನುಕೂಲಕರವಾದ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಬ್ಲೂಡಾರ್ಟ್​ ವಕ್ತಾರರು ಮಾಹಿತಿ ನೀಡಿದ್ದಾರೆ.

ಮತ್ತೊಂದು ವಿಮಾನ ಸರಕು ಸೇವೆ ಸಾಗಣೆ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ನಮ್ಮ ಕಂಪನಿ ಕಡಿಮೆ ಅವಧಿಯಲ್ಲಿ ಹೆಚ್ಚು ವಿಮಾನಗಳನ್ನು ಸೇವೆಯಲ್ಲಿ ಒದಗಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details