ಅಹಮದಾಬಾದ್: ಲಾಕ್ಡೌನ್ ನೆಪದಲ್ಲಿ ಬೀದಿ ಬದಿ ವ್ಯಾಪಾರಿಗಳ ತಳ್ಳುಗಾಡಿಗಳನ್ನು ಮೊಗಚಿ ದೌರ್ಜನ್ಯವೆಸಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತು ಮಾಡಿದ ಘಟನೆ ಗುಜರಾತ್ನಲ್ಲಿ ನಡೆದಿದೆ.
ಬೀದಿ ವ್ಯಾಪಾರಿಗಳ ಮೇಲೆ ದೌರ್ಜನ್ಯವೆಸಗಿದ ಇನ್ಸ್ಪೆಕ್ಟರ್ ಸಸ್ಪೆಂಡ್ - ಲಾಕ್ಡೌನ್
ಲಾಕ್ಡೌನ್ ಇದೆ ಎಂದು ಪೊಲೀಸರು ಜನರ ಮೇಲೆ ದೌರ್ಜನ್ಯವೆಸಗುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಈಗ ಗುಜರಾತಿನಲ್ಲಿ ಅಂಥದ್ದೇ ಒಂದು ಘಟನೆ ನಡೆದಿದ್ದು, ದೌರ್ಜನ್ಯವೆಸಗಿದ ಇನ್ಸಪೆಕ್ಟರ್ ಒಬ್ಬರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
Ahmedabad cops overturn fruits
ಅಹಮದಾಬಾದ್ನ ಕೃಷ್ಣಾನಗರದಲ್ಲಿ ಬೀದಿ ಬದಿ ತಳ್ಳುಗಾಡಿ ಇಟ್ಟುಕೊಂಡು ಹಣ್ಣು ತರಕಾರಿ ಮಾರುತ್ತಿದ್ದ ವ್ಯಾಪಾರಿಗಳನ್ನು ಕೆಲ ಪೊಲೀಸರು ಥಳಿಸಿದ್ದರು. ಅಲ್ಲದೆ ಅವರ ಗಾಡಿಗಳನ್ನು ಮೊಗಚಿ ತರಕಾರಿಗಳನ್ನೆಲ್ಲ ರಸ್ತೆಗೆ ಚೆಲ್ಲಿದ್ದರು. ಆದರೆ ಈ ಎಲ್ಲ ದೌರ್ಜನ್ಯಗಳು ಅಲ್ಲೇ ಪಕ್ಕದ ಕಟ್ಟಡವೊಂದರ ಮೇಲಿದ್ದವರೊಬ್ಬರ ಮೊಬೈಲ್ನಲ್ಲಿ ಯಥಾವತ್ತಾಗಿ ರೆಕಾರ್ಡ್ ಆಗಿದ್ದವು.
ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಸದ್ದು ಮಾಡತೊಡಗಿದಾಗ ಇನ್ಸ್ಸ್ಪೆಕ್ಟರ್ ವಿ.ಕೆ. ಚೌಧರಿ ಎಂಬಾತನನ್ನು ಅಮಾನತು ಮಾಡಿ ಗುಜರಾತ್ ಡಿಜಿಪಿ ಶಿವಾನಂದ ಝಾ ಆದೇಶ ಹೊರಡಿಸಿದ್ದಾರೆ.