ಅಹಮದಾಬಾದ್ :ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್ ಸ್ವಾಗತಿಸಲು ಅಹಮದಾಬಾದ್ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಟ್ರಂಪ್ ಮತ್ತು ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಫೆಬ್ರವರಿ 24 ರಿಂದ 25ರವರೆಗೆ ಭಾರತಕ್ಕೆ ಆಗಮಿಸಲಿದ್ದಾರೆ. ಅಹಮದಾಬಾದ್ ನಗರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುನ್ಸಿಪಲ್ ಕಾರ್ಪೊರೇಷನ್ 22 ಕಿ.ಮೀ ಉದ್ದದ ರೋಡ್ ಶೋ ಆಯೋಜಿಸಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಪಾಲಿಕೆ ಎಲ್ಲ ಧರ್ಮದ ಮತ್ತು ಸಂಸ್ಥೆಗಳ 300 ಪ್ರತಿನಿಧಿಗಳ ಸಭೆ ಕರೆದಿದೆ. ಈ ಮೆಗಾ ಕಾರ್ಯಕ್ರಮಕ್ಕಾಗಿ ಜನರನ್ನ ಸಜ್ಜುಗೊಳಿಸಲು ನಿರ್ಧರಿಸಿದೆ.
ಭಾಗವಹಿಸುವವರು ಆಯಾ ಸಮುದಾಯಗಳ ವರ್ಣರಂಜಿತ ಸಾಂಪ್ರದಾಯಿಕ ಉಡುಪಿನಲ್ಲಿರುತ್ತಾರೆ. ಇಂದಿರಾ ಸೇತುವೆಯಿಂದ ಹೊಸದಾಗಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ ಕ್ರೀಡಾಂಗಣಕ್ಕೆ ಟ್ರಂಪ್ ಅವರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ವಿವಿಧ ರಾಜ್ಯಗಳ 50,000 ಜನ ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 22 ಕಿ.ಮೀ ಮಾರ್ಗದಲ್ಲಿ ವಿಶೇಷವಾಗಿ 28 ಗುಂಪು ಮಾಡಲಾಗಿದೆ. 28 ರಾಜ್ಯಗಳ ಕಲಾವಿದರು ತಮ್ಮ ಸಾಂಪ್ರದಾಯಿಕ ಜಾನಪದ ನೃತ್ಯ ಮತ್ತು ಸಂಗೀತ, ವೇಷಭೂಷಣಗಳನ್ನು ಪ್ರದರ್ಶಿಸಲಿದ್ದಾರೆ.