ಕರ್ನಾಟಕ

karnataka

ETV Bharat / bharat

ನವ ಭಾರತ ನಿರ್ಮಾಣ ಸಂಕಲ್ಪದಿಂದ ಹಿಂದೆ ಸರಿಯಲ್ಲ: ಸಂಸತ್​​ನಲ್ಲಿ ಮೋದಿ ಭರವಸೆ - ಕಾಂಗ್ರೆಸ್​

ಲೋಕಸಭಾ ಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ದಾಖಲು ಮಾಡಲು ಸಹಕರಿಸಿದ ಜನತೆಗೆ ಧನ್ಯವಾದಗಳು ಎಂದ ಪ್ರಧಾನಿ ಮೋದಿ, ದೇಶದಲ್ಲಿ ಸುಭದ್ರ ಸರ್ಕಾರ ತರುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ ಎಂದರು.

ಮೋದಿ ಭಾಷಣ

By

Published : Jun 25, 2019, 8:53 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದು, ಭಾಷಣದ ಉದ್ದಕ್ಕೂ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ನಾವು ಅಭೂತಪೂರ್ವ ಗೆಲುವು ದಾಖಲು ಮಾಡಲು ಸಹಕರಿಸಿದ ಜನತೆಗೆ ಧನ್ಯವಾದಗಳು ಎಂದ ಮೋದಿ, ದೇಶದಲ್ಲಿ ಸುಭದ್ರ ಸರ್ಕಾರ ತರುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ ಎಂದರು.

ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಹೇಳಿರುವ ಎಲ್ಲ ಭರವಸೆ ಈಡೇರಿಸಲು ಎನ್​ಡಿಎ ಸರ್ಕಾರ ಮುಂದಾಗಿದ್ದು, ದೇಶವನ್ನ ಮತ್ತಷ್ಟು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಕ್ರಮ ಕೈಗೊಳ್ಳಲಾಗುವುದು. ನವಭಾರತ ನಿರ್ಮಾಣಕ್ಕೆ ತಾವು ತೆಗೆದುಕೊಂಡಿರುವ ಸಂಕಲ್ಪದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಮೋದಿ ಹೇಳಿದರು.

ಇದೇ ವೇಳೆ ಕಾಂಗ್ರೆಸ್​ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೋದಿ, ಸಾಕಷ್ಟು ಹಗರಣ ಮಾಡಿದವರು ರಾಜಾರೋಷವಾಗಿ ಹೊರಗಡೆ ತಿರುಗಾಡುತ್ತಿದ್ದು, ಅವರನ್ನ ಯಾಕೆ ಜೈಲಿಗೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೂ ಒಂದು ದಿನ ಬರುತ್ತೆ. ತಕ್ಷಣವೇ ಎಲ್ಲರನ್ನ ಜೈಲಿಗೆ ತಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್​ ಪಕ್ಷ ಕೇವಲ ಗಾಂಧಿ ಕುಟುಂಬದ ಗುಣಗಾನ ಮಾಡಿದೆ. ಆದರೆ ನಾವು ಆ ರೀತಿ ಮಾಡಿಲ್ಲ ಎಂದರು.

ABOUT THE AUTHOR

...view details