ನವದೆಹಲಿ: ಒಂದೇ ಕುಟುಂಬದ ಐವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಈ ದುರಂತಕ್ಕೆ ಕಾರಣ ತಿಳಿದುಬಂದಿದೆ.
ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ವ್ಯಕ್ತಿಯೋರ್ವ ಹತ್ಯೆ ಮಾಡಿದ್ದಾನೆ. ದೆಹಲಿಯ ಭಜನ್‌ಪುರದಲ್ಲಿಈ ಘಟನೆ ಜರುಗಿತ್ತು ಹಣದ ವಿಷಯಕ್ಕೆ ಸಂಬಂಧಿಸಿಂತೆ ಜಗಳವಾಗಿ ಕೋಪಗೊಂಡ ವ್ಯಕ್ತಿ ಕಬ್ಬಿಣದ ರಾಡ್ನಿಂದ ಐವರನ್ನೂ ಹೊಡೆದು ಕೊಂದಿದ್ದಾನೆ ಎಂದು ತಿಳಿದುಬಂದಿದೆ.