ನವದೆಹಲಿ : ಮೇ 25 ರಿಂದ ದೇಶಿಯ ವಿಮಾನಗಳ ಹಾರಾಟ ಪುನರಾರಂಭಗೊಳ್ಳುವ ಹಿನ್ನೆಲೆ ವಿಮಾನ ನಿಲ್ದಾಣ ನಿರ್ವಾಹಕರಿಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ವನ್ನು ಬಿಡುಗಡೆ ಮಾಡಿದೆ.
ಮೇ 25 ರಿಂದ ದೇಶಿಯ ವಿಮಾನಗಳ ಹಾರಾಟ: ಮಾರ್ಗಸೂಚಿ ಬಿಡುಗಡೆಗೊಳಿಸಿದ ಎಎಐ
ಲಾಕ್ ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ದೇಶಿಯ ವಿಮಾನಗಳ ಹಾರಾಟ ಮೇ 25ರಿಂದ ಪುನರಾರಂಭಗೊಳ್ಳಲಿದೆ. ಹೀಗಾಗಿ ವಿಮಾನ ನಿಲ್ದಾಣಗಳ ನಿರ್ವಾಹಕರಿಗೆ ವಿಮಾನ ನಿಲ್ದಾಣ ಪ್ರಾಧಿಕಾರ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.
ಮೇ 25 ರಿಂದ ದೇಶಿಯ ವಿಮಾನಗಳ ಹಾರಾಟ
ಎಎಐ ಬಿಡುಗಡೆ ಮಾಡಿರುವ ಎಸ್ಒಪಿನಲ್ಲಿ ವಿಮಾನಯಾನ ಮಾಡುವ 14 ವರ್ಷದೊಳಗಿನ ಮಕ್ಕಳನ್ನು ಹೊರತುಪಡಿಸಿ ಎಲ್ಲಾ ಪ್ರಯಾಣಿಕರು ಆರೋಗ್ಯ ಸೇತು ಆ್ಯಪ್ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಪ್ರಯಾಣಿಕರು ಏರ್ಪೋರ್ಟ್ ಟರ್ಮಿನಲ್ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕು ಎಂದು ಸೂಚಿಸಿದೆ.
ಟರ್ಮಿನಲ್ ಕಟ್ಟಡಕ್ಕೆ ಪ್ರಯಾಣಿಕರು ಪ್ರವೇಶಿಸುವ ಮುನ್ನ ವಿಮಾನ ನಿಲ್ದಾಣ ನಿರ್ವಾಹಕರು ಪ್ರಯಾಣಿಕರ ಲಗೇಜ್ ಕೊಂಡೊಯ್ಯಲು ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸಿದೆ.