ಕರ್ನಾಟಕ

karnataka

ETV Bharat / bharat

ಗೃಹಿಣಿ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿದ ಕಿರಾತಕ... ಮುಂದೇನಾಯ್ತು? - ಯುವಕ

ಗೃಹಿಣಿ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿದ ಯುವಕನಿಗೆ ಆತನ ಕುಟುಂಬಸ್ಥರು ಬೆಂಬಲ ಸೂಚಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ಸಂಚಲನ ಮೂಡಿಸಿದೆ.

ಕೃಪೆ: Twitter

By

Published : May 14, 2019, 5:27 PM IST

ಗುಂಟೂರು: ಮಹಿಳೆ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿ ಆಕೆಗೆ ಬ್ಲಾಕ್​ಮೇಲ್​ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ಜೀವನ ಸಾಗಿಸಲು ಹತ್ತು ವರ್ಷಗಳ ಹಿಂದೆ ಶ್ರೀಕಾಕುಳಂ ಬಿಟ್ಟು ಗುಂಟೂರಿಗೆ ಬಂದಿದ್ದೆವು . ಕೂಲಿ ಕೆಲಸ ಮಾಡುತ್ತಲೇ ನನ್ನ ಕುಟುಂಬವನ್ನು ಸಾಗಿಸುತ್ತಿದ್ದೇನೆ. ಆದ್ರೆ ಆ ಯುವಕ ನನ್ನ ಹೆಂಡ್ತಿ ಸ್ನಾನ ಮಾಡುತ್ತಿರುವ ವಿಡಿಯೋ ತೆಗೆದಿದ್ದಾನೆ. ಈ ಸುದ್ದಿ ನನ್ನ ಹೆಂಡ್ತಿಗೆ ತಿಳಿದಿದೆ. ಬಳಿಕ ಯಾರಿಗೂ ಹೇಳದಂತೆ ಎಚ್ಚರಿಸಿದ್ದಾನೆ. ಈ ವಿಷಯ ಬಯಲಾದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಡುವುದಾಗಿ ನನ್ನ ಹೆಂಡತಿಗೆ ಬ್ಲಾಕ್​ಮೇಲ್​ ಮಾಡುಲು ಶುರು ಮಾಡಿದ್ದಾನೆ ಎಂದು ಗೃಹಿಣಿಯ ಗಂಡ ಆರೋಪಿಸಿದ್ದಾರೆ.

ಇನ್ನು ಈ ವಿಷಯ ಕುರಿತು ಯುವಕನ ಕುಟುಂಬಸ್ಥರಿಗೆ ತಿಳಿದಿದೆ. ಬುದ್ಧಿ ಹೇಳುವ ಪೋಷಕರೇ ಆ ಯುವಕನ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದ ನನ್ನ ಪತ್ನಿ ಮನಸ್ತಾಪಕ್ಕೆ ಗುರಿಯಾಗಿದ್ದು, ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಪೊಲೀಸರು ಯುವಕನನ್ನು ಬಂಧಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕಾಗಿದೆ ಎಂದು ಮಹಿಳೆಯ ಗಂಡ ಕೇಳಿಕೊಂಡಿದ್ದಾನೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details