ಕರ್ನಾಟಕ

karnataka

ETV Bharat / bharat

ಪ್ರೀತಿಸಿ ಮದುವೆ, ಮತ್ತೊಬ್ಬನ ಮೇಲೆ ಕ್ರಶ್​... ಅವನಿಗಾಗಿ ಮಗ, ಗಂಡನನ್ನೇ ಕೊಂದ ಪತ್ನಿ! - ಕೊಂದ ಪತ್ನಿ

ಪ್ರೀತಿಸಿ ಮದುವೆಯಾಗಿ ಮಗುವಾದ ಮೇಲೆ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟವಾಡುತ್ತಿದ್ದ ಪತ್ನಿ ಆತನಿಗಾಗಿ ತನ್ನ ಗಂಡ, ಮಗುವನ್ನು ಬರ್ಬರವಾಗಿ ಕೊಲೆ ಮಾಡಿ ಹೂತಾಕಿರುವ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ.

ಪ್ರೀತಿಸಿ ಮದುವೆ, ಮತ್ತೊಬ್ಬನ ಮೇಲೆ ಕ್ರಶ್​

By

Published : May 18, 2019, 7:50 PM IST

ಹೈದರಾಬಾದ್ : ಮನೆಯವರನ್ನು ಎದುರಿಸಿ ಪ್ರೀತಿಸಿ ಮದುವೆಯಾಗಿ ಜೀವನ ಸಾಗಿಸುತ್ತಿದ್ದ ಆ ಜೋಡಿಯ ಬಾಳಿನಲ್ಲಿ ವಿವಾಹೇತರ ಸಂಬಂಧದ ಬಿರುಗಾಳಿ ಎದ್ದಿದೆ. ಗಂಡ, ಮಗುವನ್ನು ಕೊಂದ ಹೆಂಡ್ತಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ವೆಲೂರು ಜಿಲ್ಲೆಯ ತಾಜ್​ಪೂರಾ ಮಂದವೇಲಿ ಗ್ರಾಮದ ರಾಜಾ (25) ಎಲೆಕ್ಟ್ರಿಷಿಯನ್​ ಕೆಲಸಗಾರ. ಎರಡು ವರ್ಷಗಳ ಹಿಂದೆ ದೀಪಿಕಾಳನ್ನು ಲವ್​ ಮಾಡಿ ಮನೆಯವರನ್ನು ಎದುರಿಸಿ ಮದುವೆ ಮಾಡಿಕೊಂಡಿದ್ದ. ಈ ದಂಪತಿಗೆ 13 ತಿಂಗಳ ಗಂಡು ಮಗು ಇದೆ. ಆದ್ರೆ ಹೆಂಡ್ತಿ ದೀಪಿಕಾ ಮತ್ತೊಬ್ಬನ ಜೊತೆ ಲವ್ವಿ-ಡವ್ವಿ ಆಟ ಶುರು ಮಾಡಿದ್ದಾಳೆ.

ಚಿತ್ರದಲ್ಲಿ ಮಗ ಪ್ರಿನಿಷ್​, ತಂದೆ ರಾಜು

ಇನ್ನು ಈ ಆಟ ಬಯಲಾಗುತ್ತೆ ಎಂಬ ಭಯ ದೀಪಿಕಾಗೆ ಕಾಡಿದೆ. ಗಂಡ ರಾಜಾ ಮತ್ತು ಮಗ ಪ್ರಿನಿಷ್​ನನ್ನು ಕೊಲೆ ಮಾಡಲು ಸ್ಕೆಚ್​​​ ಹಾಕಿದ್ದಾಳೆ. ಅದರಂತೆ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ ಹೂತಾಕಿದ್ದಳೆ. ಬಳಿಕ ದೀಪಿಕಾ ಈ ತಿಂಗಳು 13ರಂದು ಗಂಡ, ಮಗು ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.

ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಪೊಲೀಸರು ದೀಪಿಕಾಳನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ದೀಪಿಕಾ ಗೊಂದಲದ ಹೇಳಿಕೆಗಳನ್ನು ನೀಡಿದ್ದಾಳೆ. ಪೊಲೀಸರು ತಮ್ಮದೇ ಸ್ಟೈಲ್​ನಲ್ಲಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಗಂಡ, ಮಗುವನ್ನು ಕೊಲೆ ಮಾಡಿ ಮುಚ್ಚಾಕಿರುವ ಸ್ಥಳವನ್ನು ಆರೋಪಿ ದೀಪಿಕಾ ಪೊಲೀಸರಿಗೆ ತೋರಿಸಿದ್ದಾಳೆ. ಇನ್ನು ಪೊಲೀಸರು ದೀಪಿಕಾ ಮತ್ತು ಆತನ ಬಾಯ್​ಫ್ರೆಂಡ್​ನನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ABOUT THE AUTHOR

...view details