ಕಣ್ಣೂರು (ಕೇರಳ): ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ.
ಎಸ್‌ಡಿಪಿಐ ಕಾರ್ಯಕರ್ತನ ಬರ್ಬರ ಹತ್ಯೆ, ಕೊಲೆಗೆ ಕಾರಣವಾಯ್ತಾ ಎಬಿವಿಪಿ ಸದಸ್ಯನ ಹತ್ಯೆ? - kerala latest news
ಎಸ್‌ಡಿಪಿಐ ಕಾರ್ಯಕರ್ತ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಹೋಗುವಾಗ ಅಡ್ಡ ಬಂದ ಅಪರಿಚಿತರ ಗುಂಪು, ಈತನನ್ನು ಕಾರಿನಿಂದ ಕೆಳಗಿಳಿಸಿ ಹತ್ಯೆ ಮಾಡಿದೆ.
ಕಣ್ಣೂರಿನ ಕನ್ನವಂ ಮೂಲದ ವಜಪ್ಪುರೈಲ್ ಸಲಾಹುದ್ದೀನ್(30) ಹತ್ಯೆಯಾದವ. ಈತ 2018 ರ ಜನವರಿಯಲ್ಲಿ ನಡೆದ ಎಬಿವಿಪಿ ಸದಸ್ಯ ಶ್ಯಾಮಪ್ರಸಾದ್ ಅವರ ಕೊಲೆ ಪ್ರಕರಣದಲ್ಲಿ ಏಳನೇ ಆರೋಪಿ ಕೂಡ ಆಗಿದ್ದ. ಸಲಾಹುದ್ದೀನ್ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕ್‌ಗಳಲ್ಲಿ ಬಂದ ಗುಂಪು ಅವರನ್ನು ತಡೆದಿದೆ. ಅವನು ಕಾರಿನಿಂದ ಇಳಿಯುವಾಗ ಗ್ಯಾಂಗ್ ಅವನ ಮೇಲೆ ದಾಳಿ ಮಾಡಿದೆ. ಕುತ್ತಿಗೆಗೆ ತೀವ್ರವಾದ ಹಿನ್ನೆಲೆ ತಲಶೇರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.
ಇನ್ನು ಎಬಿವಿಪಿ ಸದಸ್ಯ ಶ್ಯಾಮಪ್ರಸಾದ್ ಅವರನ್ನು 2018 ಜನವರಿಯಲ್ಲಿ ಹತ್ಯೆ ಮಾಡಲಾಗಿತ್ತು. ಆನಂತರ ಈ ಸಲಾಹುದ್ದೀನ್ ಒಂದು ವರ್ಷಕ್ಕೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದ. ಮಾರ್ಚ್ 2019 ರಲ್ಲಿ ಸಲಾಹುದ್ದೀನ್ ಪೊಲೀಸರ ಮುಂದೆ ಶರಣಾಗಿದ್ದ.