ಕರ್ನಾಟಕ

karnataka

ETV Bharat / bharat

ಪ್ರೀತಿಸಿ ಮದುವೆ ಮಾಡಿಕೊಂಡಾಕೆಯನ್ನ 40 ದಿನದಲ್ಲೇ ಸುಟ್ಟು ಹಾಕಿದ ಗಂಡ! - ಸುಟ್ಟು ಹಾಕಿದ ಗಂಡ

ಪ್ರೀತಿಸಿ ಮದುವೆ ಮಾಡಿಕೊಂಡು ಮಡದಿಯನ್ನು ಗಂಡನೊಬ್ಬ ಕೇವಲ 40 ದಿನಕ್ಕೆ ಸುಟ್ಟು ಹಾಕಿರುವ ಘಟನೆಯನ್ನು ತೆಲಂಗಾಣದ ಕುಮುರಂ ಭೀಂ ಜಿಲ್ಲೆಯಲ್ಲಿ ನಡೆದಿದೆ.

ಗಂಗಾನಾಗರಿ ಚಿತ್ರ

By

Published : Apr 3, 2019, 4:59 PM IST

ಜೈನೂರು ತಾಲೂಕಿನ ಭೂಸಿಮೆಟ್ಟ ಗ್ರಾಮದಲ್ಲಿ ಈ ಘಟನೆ ತೀವ್ರ ಆತಂಕ ಸೃಷ್ಟಿಸಿದೆ. ಭೂಸಿಮೆಟ್ಟ ನಿವಾಸಿ ಮಾಧವ್​ ರಾವು (25) ಇದೇ ಗ್ರಾಮದ ಗಂಗಾಸಾಗರಿ (22) ಯುವತಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದರು.

ಇನ್ನು ಮದುವೆಗೂ ಮುನ್ನ ಮಾಧವ್​ ಮತ್ತೊಂದು ಯುವತಿಯೊಂದಿಗೆ ಲವ್ವಿ- ಡವ್ವಿ ಶುರುವಿಟ್ಟುಕೊಂಡಿದ್ದಾನೆ. ಈ ವಿಷಯ ಗಂಗಾಸಾಗರಿಗೆ ತಿಳಿದಿದೆ. ಬಳಿಕ ಈ ವಿಷಯ ಸಂಬಂಧ ಇಬ್ಬರ ಮಧ್ಯೆ ಕಲಹಗಳು ನಡೆಯುತ್ತಲೇ ಸಾಗಿವೆ. ತನ್ನ ದಾರಿಗೆ ಅಡ್ಡವಾಗುತ್ತಿದ್ದಾಳೆ ಎಂದು ಹೆಂಡ್ತಿ ಗಂಗಾಸಾಗರಿಯನ್ನು ಕುತ್ತಿಗೆ ಇಸುಕಿ ಕೊಲೆ ಮಾಡಿದ್ದಾನೆ.

ಮಾಧವ್​ ತನ್ನ ಹೆಂಡ್ತಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಅರಣ್ಯ ಪ್ರದೇಶಕ್ಕೆ ಕೊಂಡ್ಯೊಯ್ದು ಸುಟ್ಟು ಹಾಕಿದ್ದಾನೆ. ಕೆಲ ದಿನಗಳ ಬಳಿಕ ಗಂಗಾಸಾಗರಿ ಪೋಷಕರಿಗೆ ‘ನನ್ನ ಹೆಂಡ್ತಿ ಎಲ್ಲಿ’ ಎಂದು ಪ್ರಶ್ನಿಸಿದ್ದಾನೆ. ಬಳಿಕ ಪೊಲೀಸರಿಗೆ ಗಂಗಾಸಾಗರಿ ಕುಟುಂಬಸ್ಥರು ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಅನುಮಾನಸ್ಪದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ ಮಾಧವ್​ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಘಟನೆ ಕುರಿತು ಜೈನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ABOUT THE AUTHOR

...view details