ಕರ್ನಾಟಕ

karnataka

ETV Bharat / bharat

ಪುಣೆಯಿಂದ  ಸೊಲ್ಲಾಪುರಕ್ಕೆ ಕಾಲ್ನಡಿಗೆಯಲ್ಲೇ ತಲಪಿದ 9 ತಿಂಗಳ ಗರ್ಭಿಣಿ - pregnant woman walked down from Pune to Solapur

9 ತಿಂಗಳ ಗರ್ಭಿಣಿ ಪುಣೆಯಿಂದ ಸೊಲ್ಲಾಪುರದ ವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಇವರು ದಾರಿ ಸಾಗಿಸುತ್ತಿದ್ದ ದೃಶ್ಯ ಸೊಲ್ಲಾಪುರದ ಛಾಯಾಗ್ರಾಹಕ ಯಶ್ವಂತ್ ಸದುಲ್ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ.

ದಂಪತಿಗೆ ಸಹಾಯ ಮಾಡಿದ ಛಾಯಾಗ್ರಾಹಕ ಯಶ್ವಂತ್ ಸದುಲ್
ದಂಪತಿಗೆ ಸಹಾಯ ಮಾಡಿದ ಛಾಯಾಗ್ರಾಹಕ ಯಶ್ವಂತ್ ಸದುಲ್

By

Published : May 16, 2020, 8:25 PM IST

ಸೊಲ್ಲಾಪುರ (ಮಹಾರಾಷ್ಟ್ರ) :ಕರ್ನಾಟಕ ಮೂಲದ 9 ತಿಂಗಳ ಗರ್ಭಿಣಿ ಪುಣೆಯಿಂದ ಸೊಲ್ಲಾಪುರದ ವರೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆ. ಇವರು ಕರ್ನಾಟಕದ ಕಲಬುರಗಿಗೆ ಹೋಗಬೇಕಾಗಿದ್ದು, ತನ್ನ ಪತಿಯೊಂದಿಗೆ ಪುಣೆಯಿಂದ ನಡೆದುಕೊಂಡು ಬಂದು ಸೊಲ್ಲಾಪುರವನ್ನು ತಲುಪಿದ್ದಾರೆ.

ಛಾಯಾಗ್ರಾಹಕ ಯಶ್ವಂತ್ ಸದುಲ್ ಸೆರೆಹಿಡಿದ ದೃಶ್ಯ

ಕಲಬುರಗಿ ಮೂಲದ ಶೀಲಾ ಹಾಗೂ ಅವರ ಪತಿ ಪುಣೆಗೆ ಕೆಲಸಕ್ಕೆಂದು ತೆರಳಿದ್ದರು. ಬಳಿಕ ಅಲ್ಲಿಯೇ ನೆಲೆಸಿದ್ದರು. ಗರ್ಭಿಣಿಯಾಗಿದ್ದ ಶೀಲಾ ತೋರಿಸುತ್ತಿದ್ದ ಆಸ್ಪತ್ರೆಯು ಲಾಕ್​ಡೌನ್​ನಿಂದಾಗಿ ಮುಚ್ಚಲ್ಪಟ್ಟಿತು. ಬೇರೆ ಯಾವುದೇ ಆಸ್ಪತ್ರೆಗೂ ಹೋಗಲಾಗದ ಕಾರಣ ದಂಪತಿ ತಮ್ಮೂರಿಗೆ ಪ್ರಯಾಣಿಸಲು ನಿರ್ಧರಿಸಿದರು. ಇದಕ್ಕಾಗಿ ದಂಪತಿ ಕಾಲ್ನಡಿಗೆಯಲ್ಲಿ ಪುಣೆಯಿಂದ ಸೊಲ್ಲಾಪುರಕ್ಕೆ ನಡೆದುಕೊಂಡು ಬಂದರು. ಇವರು ಕಾಲ್ನಡಿಗೆಯಲ್ಲಿ ದಾರಿ ಸಾಗಿಸುತ್ತಿದ್ದ ದೃಶ್ಯ ಸೊಲ್ಲಾಪುರದ ಛಾಯಾಗ್ರಾಹಕ ಯಶ್ವಂತ್ ಸದುಲ್ ಅವರ ಕ್ಯಾಮರಾದಲ್ಲಿ ಸೆರೆಯಾಗಿದೆ.

ದಂಪತಿಗೆ ಸಹಾಯ ಮಾಡಿದ ಛಾಯಾಗ್ರಾಹಕ ಯಶ್ವಂತ್ ಸದುಲ್

ಬಳಿಕ ಛಾಯಾಗ್ರಾಹಕ ಯಶ್ವಂತ್ ಸದುಲ್​ ಸಹಾಯದಿಂದ ಇವರನ್ನು ಸೊಲ್ಲಾಪುರದ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗೆ ಕರೆದೊಯ್ದು ಬಿಡಲಾಯಿತು. ಮಾರುಕಟ್ಟೆ ಸಮಿತಿಯಿಂದ ಅವರನ್ನು ವಾಹನದ ಮೂಲಕ ಕಲಬುರಗಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details