ಕರ್ನಾಟಕ

karnataka

ETV Bharat / bharat

ಭೂಲೋಕದ ಮೇಲಿನ ಸ್ವರ್ಗ ಜಮ್ಮು-ಕಾಶ್ಮೀರ​​, ಇನ್ಮುಂದೆ ಹೊಸ ಯುಗ ಆರಂಭ; ದೇಶದೆಲ್ಲೆಡೆ ಒಂದೇ ಕಾನೂನು! - ಜಮ್ಮು-ಕಾಶ್ಮೀರ

ಮೋದಿ ಭಾಷಣ/PM Modi

By

Published : Aug 8, 2019, 7:36 PM IST

Updated : Aug 8, 2019, 11:48 PM IST

20:42 August 08

ಕಾಶ್ಮೀರ ಭೂಲೋಕದ ಮೇಲಿನ ಸ್ವರ್ಗ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಭಾಷಣ

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ಆರ್ಟಿಕಲ್​ 370 ರದ್ದುಗೊಂಡಿದ್ದು, ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಸುಮಾರು 40ಕ್ಕೂ ಹೆಚ್ಚು ನಿಮಿಷಗಳ ಕಾಲ ಭಾಷಣ ಮಾಡಿದರು. ಈ ವೇಳೆ ಜಮ್ಮು-ಕಾಶ್ಮೀರ ಭೂಲೋಕದ ಮೇಲಿನ ಸ್ವರ್ಗ ಎಂದ ಪ್ರಧಾನಿ ಲಡಾಕ್​​ನಲ್ಲೂ ಅನೇಕ ಸಾಹಸ ಪ್ರವಾಸಿ ತಾಣಗಳಿವೆ ಎಂದು ತಿಳಿಸಿದರು.

ಶ್ಯಾಮ್​ ಪ್ರಸಾದ್​ ಹಾಗೂ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಕನಸು ಇದೀಗ ನಾವು ನನಸು ಮಾಡಿದ್ದು, ಇನ್ಮುಂದೆ ಜಮ್ಮು-ಕಾಶ್ಮೀರ ಅಭಿವೃದ್ಧಿ ಕಾಣಲಿದೆ ಎಂದರು. ಎಲ್ಲ ರಾಜ್ಯಗಳಲ್ಲಿರುವಂತೆ ಏಮ್ಸ್​,ಐಐಟಿ,ಐಐಎಂ ಇಲ್ಲೂ ಸಹ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಎಲ್ಲ ಮಕ್ಕಳಂತೆ ಇಲ್ಲಿನ ಮಕ್ಕಳಿಗೂ ಶಿಕ್ಷಣ ಸಿಗಲಿದೆ ಎಂದು ಮೋದಿ ತಿಳಿಸಿದರು. ಪ್ರಮುಖವಾಗಿ ಅವರು ಮಾತನಾಡಿದ ಅಂಶಗಳು ಇಂತಿವೆ.

20:42 August 08

ಜಮ್ಮು-ಕಾಶ್ಮೀರದ ಜನರ ರಕ್ಷಣೆಗೆ ಶ್ರಮಿಸುತ್ತಿರುವ ಸೈನಿಕರಿಗೆ ನಮ್ಮ ಅಭಿನಂದನೆ: ಮೋದಿ

  • ಜಮ್ಮು-ಕಾಶ್ಮೀರದ ಜನರ ರಕ್ಷಣೆಗೆ ಶ್ರಮಿಸುತ್ತಿರುವ ಸೈನಿಕರಿಗೆ ನಮ್ಮ ಅಭಿನಂದನೆ: ಮೋದಿ
  • ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ
  • ಉತ್ತಮ ಜೀವನ ರೂಪಿಸಿಕೊಳ್ಳುವ ನಿರ್ಧಾರ ನಿಮ್ಮ ಬಳಿ ಇದೆ
  • ಧಾರ್ಮಿಕ, ಸಾಹಸಿ ಪ್ರವಾಸಕ್ಕೆ ಲಡಾಕ್​ ಸೂಕ್ತ,ಕಾಶ್ಮೀರ, ಲಡಾಕ್​ ಅಭಿವೃದ್ಧಿಗೆ ಯೋಜನೆ

20:37 August 08

ಕಾಶ್ಮೀರ ಭೂಲೋಕದ ಮೇಲಿನ ಸ್ವರ್ಗ: ಪ್ರಧಾನಿ ಮೋದಿ

ಪ್ರಧಾನಿ ಮೋದಿ ಭಾಷಣ
  • ಕಾಶ್ಮೀರ ಭೂಲೋಕದ ಮೇಲಿನ ಸ್ವರ್ಗ: ಪ್ರಧಾನಿ ಮೋದಿ
  • ಸೌರಶಕ್ತಿ ಉತ್ಪಾದನೆ ಮಾಡಲು ಲಡಾಕ್​​ನಲ್ಲಿ ಅನೇಕ ಸ್ಥಳಗಳಿವೆ
  • ಮನೆಮನೆಗೆ ವಿದ್ಯುತ್​, ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡಲು ಕ್ರಮ
  • ಈದ್​ ಹಬ್ಬದ ಪ್ರಯುಕ್ತ ಜಮ್ಮು-ಕಾಶ್ಮೀರದ ಜನರಿಗೆ ಶುಭಾಶಯ
  • ಖಾಸಗಿ ಕಂಪನಿ ಜಮ್ಮು-ಕಾಶ್ಮೀರದಲ್ಲಿ ಬಂದರೆ ಸ್ವಾಗತಾರ್ಹ
  • ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸಾಧನೆ ಮಾಡಲು ಕೇಂದ್ರ ಕ್ರಮ
  • ದೇಶದ ಉದ್ಯಮಗಳು ಜಮ್ಮು-ಕಾಶ್ಮೀರದಲ್ಲಿ ಕಂಪನಿ ತೆರೆಯಲು ಆಹ್ವಾನ

20:31 August 08

ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗ್​ ಮಾಡಲು ಬನ್ನಿ ಎಂದು ಮನವಿ ಮಾಡುವೆ : ಪ್ರಧಾನಿ ಮೋದಿ

  • ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ನಾವು ನಿರ್ಧಾರ: ಮೋದಿ
  • ದಶಕಗಳಿಂದ ಅಭಿವೃದ್ಧಿ ಕಾಣದ ಯೋಜನೆಗಳನ್ನ ಮತ್ತೊಮ್ಮೆ ಕೈಗೆತ್ತಿಕೊಳ್ಳುತ್ತೇವೆ
  • ಕಾಶ್ಮೀರದಲ್ಲಿ ಶೂಟಿಂಗ್​ ಮಾಡಲು ಬನ್ನಿ ಎಂದು ಮನವಿ ಮಾಡುವೆ : ಮೋದಿ
  • ಒಂದು ಕಾಲಿದಲ್ಲಿ ಇಲ್ಲಿ ಬಾಲಿವುಡ್​ ಸಿನಿಮಾಗಳು ಸಾಲು ಸಾಲಾಗಿ ಶೂಟಿಂಗ್​ ಆಗುತ್ತಿದ್ದವು
  • ಜಮ್ಮು-ಕಾಶ್ಮೀರ್​,ಲಡಾಕ್​​ನಲ್ಲಿ ಅನೇಕ ಪ್ರವಾಸೋದ್ಯಮ ಸ್ಥಳಗಳಿವೆ
  • ಬಾಲಿವುಡ್​​,ಕಾಲಿವುಡ್​ ಹಾಗೂ ಹಾಲಿವುಡ್​ಗೆ ನಾನು ಮನವಿ

20:24 August 08

ಜಮ್ಮು-ಕಾಶ್ಮೀರದಲ್ಲಿ ನಾವು ಪಾರದರ್ಶನ ಚುನಾವಣೆ ನಡೆಸಲು ಕ್ರಮ

ಮೋದಿ ಭಾಷಣ
  • ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬಲಗೊಳಿಸಲು ನಾವು ನಿರ್ಧಾರ
  • ಕೇಂದ್ರ ಸರ್ಕಾರ ಇನ್ಮುಂದೆ ನೇರವಾಗಿ ಆಡಳಿತ ನಡೆಸಲಿದ್ದೇವೆ
  • ಮುಂದಿನ ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ
  • ಜಮ್ಮು-ಕಾಶ್ಮೀರ ಹಾಗೂ ಲಡಾಕ್​ ಯುವಜನತೆಗೆ ಪ್ರಧಾನಿ ಮೋದಿ ಕಿವಿಮಾತು
  • ನಿಮ್ಮ ನಿಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ನೀವೂ ಮುಂದೆ ಬನ್ನಿ
  • ಜಮ್ಮು-ಕಾಶ್ಮೀರದಲ್ಲಿ ನಾವು ಪಾರದರ್ಶನ ಚುನಾವಣೆ ನಡೆಸಲು ಕ್ರಮ
  • ಜಮ್ಮು-ಕಾಶ್ಮೀರದ ಜನರು ಪ್ರತ್ಯೇಕವಾದವನ್ನ ಕೊನೆಗೊಳಿಸಲು ಮುಂದೆ ಬರಲಿದ್ದಾರೆ
  • ಪಂಚಾಯತ್​ ಚುನಾವಣೆಗಳಲ್ಲಿ ಈಗಾಗಲೇ ಪಾರದರ್ಶಕತೆ ಕಂಡು ಬಂದಿದೆ

20:21 August 08

ಐಐಟಿ,ಸಾರಿಗೆ ಸಂಪರ್ಕ,ಐಐಎಂ,ಏಮ್ಸ್​​​​​ ಸೇರಿದಂತೆ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಕ್ರಮ

  • ಐಐಟಿ,ಸಾರಿಗೆ ಸಂಪರ್ಕ,ಐಐಎಂ,ಏಮ್ಸ್​​​​​ ಸೇರಿದಂತೆ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಕ್ರಮ
  • ಬಹಳಷ್ಟು ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿದ್ದೇವೆ
  • ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಲಿದೆ

20:15 August 08

ಭಾರತದ ಎಲ್ಲಡೆ ಒಂದೇ ಸಂವಿಧಾನ

  • ಪಾಕಿಸ್ತಾನದ ಉಗ್ರವಾದದಿಂದ 45 ಸಾವಿರ ಭಾರತೀಯರ ಸಾವು
  • ಭಾರತದ ಎಲ್ಲಡೆ ಒಂದೇ ಸಂವಿಧಾನ
  • ದೇಶದ ಎಲ್ಲಡೆ ಸಿಗುವ ಹಾಗೇ ಕಾಶ್ಮೀರದಲ್ಲೂ ಇನ್ಮುಂದೆ ಶಿಕ್ಷಣ
  • ಜಮ್ಮು-ಕಾಶ್ಮೀರದಲ್ಲಿ ಹೊಸ ಯುಗ ಆರಂಭ, ಕುಟಂಬ ಆಡಳಿತ ಮುಕ್ತಾಯ
  • ಜಮ್ಮು-ಕಾಶ್ಮೀರ್​, ಲಡಾಕ್​​ನಲ್ಲಿ ಇನ್ಮುಂದೆ ಹೊಸ ಹೊಸ ಉದ್ಯೋಗ ಸೃಷ್ಠಿ
  • ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗ ನೀಡಲು ಕೇಂದ್ರ ಸರ್ಕಾರ ನಿರ್ಧಾರ

20:12 August 08

ಶಾಮ್​ ಪ್ರಸಾದ್​, ಅಟಲ್​ ಬಿಹಾರಿ ವಾಜಪೇಯಿ ಅವರ ಕನಸು ನನಸು

  • ಶಾಮ್​ ಪ್ರಸಾದ್​, ಅಟಲ್​ ಬಿಹಾರಿ ವಾಜಪೇಯಿ ಅವರ ಕನಸು ನನಸು
  • ಈ ಸಂದರ್ಭದಲ್ಲಿ ದೇಶದ ಎಲ್ಲ ಜನರಿಗೂ ನಾನು ಅಭಿನಂದನೆ ಸಲ್ಲಿಕೆ ಮಾಡುತ್ತೇನೆ
  • ಕಾಶ್ಮೀರದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ತಾಂಡವಾಡುತ್ತಿತ್ತು
  • ಉಗ್ರವಾದದಿಂದಲೇ ಜಮ್ಮು-ಕಾಶ್ಮೀರ ಅಭಿವೃದ್ಧಿ ಕಂಡಿಲ್ಲ
  • ಆರ್ಟಿಕಲ್​ 370, 35ಎ ಯಿಂದಲೇ ಜಮ್ಮು-ಕಾಶ್ಮೀರದ ಅಭಿವೃದ್ಧಿ ಆಗಿಲ್ಲ

20:05 August 08

ನರೇಂದ್ರ ಮೋದಿ ಭಾಷಣ... ಕಣಿವೆ ರಾಜ್ಯ ಜಮ್ಮು-ಕಾಶ್ಮೀರ ಕುರಿತು ಐತಿಹಾಸಿಕ ನಿರ್ಧಾರ

  • ನರೇಂದ್ರ ಮೋದಿ ಭಾಷಣ...  ಕಣಿವೆ ರಾಜ್ಯ ಜಮ್ಮು-ಕಾಶ್ಮೀರ ಕುರಿತು ಐತಿಹಾಸಿಕ ನಿರ್ಧಾರ
  • ಜಮ್ಮು-ಕಾಶ್ಮೀರದ ಆರ್ಟಿಕಲ್​ 370 ರದ್ದು ಬಗ್ಗೆ ಮೋದಿ ಮಾತು
  • ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದೇವೆ ಎಂದ ಪ್ರಧಾನಿ ಮೋದಿ
  • ಕಾಶ್ಮೀರ, ಲಡಾಕ್​ ಜನರು ಅನೇಕ ಯೋಜನೆಗಳಿಂದ ವಂಚಿತರಾಗಿದ್ದರು.
  • ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು

19:52 August 08

ಮೋದಿ ಭಾಷಣಕ್ಕೆ ಶುರುವಾಯ್ತು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ

  • ಪ್ರಧಾನಿ ನರೇಂದ್ರ ಮೋದಿ ಭಾಣಷ ಆರಂಭವಾಗುವುದಕ್ಕೂ ಕೆಲ ನಿಮಿಷ ಮಾತ್ರ ಬಾಕಿ
  • ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಚರ್ಚೆ ಆರಂಭಗೊಂಡಿದ್ದು, ಯಾವ ವಿಷಯದ ಬಗ್ಗೆ ಮಾತನಾಡಲಿದ್ದಾರೆ ಎಂಬ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದ್ದಾರೆ.
  • ಈ ಹಿಂದೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ 1000 ಹಾಗೂ 500 ಮುಖಬೆಲೆಯ ನೋಟು ಬ್ಯಾನ್​ ಮಾಡಿದ್ದರು.

19:25 August 08

ಭೂಲೋಕದ ಮೇಲಿನ ಸ್ವರ್ಗ ಜಮ್ಮು-ಕಾಶ್ಮೀರ​​, ಇನ್ಮುಂದೆ ಹೊಸ ಯುಗ ಆರಂಭ; ದೇಶದೆಲ್ಲೆಡೆ ಒಂದೇ ಸಂವಿಧಾನ

ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370, 35ಎ ಕಲಂ ಅನ್ನು ಕೇಂದ್ರ ಸರಕಾರ ರದ್ದುಗೊಳಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ  ದೇಶವನ್ನು ಉದ್ದೇಶಿಸಿ ಇಂದು ರಾತ್ರಿ 8ಗಂಟೆಗೆ ಮಾತನಾಡುತ್ತಿದ್ದಾರೆ.

ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಜೆಂಡಾದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಇತ್ತೀಚೆಗೆ ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಮಹತ್ವದ ನಿರ್ಧಾರದ ಬಗ್ಗೆ ಮಾತನಾಡುತ್ತಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಆರ್ಟಿಕಲ್​ 370ರದ್ದುಗೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿರುವುದು ಬಹಳಷ್ಟು ಮಹತ್ವ ಪಡೆದುಕೊಂಡಿದೆ.ಇಷ್ಟು ದಿನ ವಿಶೇಷ ಸ್ಥಾನಮಾನಗಳೊಂದಿಗೆ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರ ಇನ್ಮುಂದೆ ಕೇಂದ್ರಾಡಳಿತ ಪ್ರದೇಶವಾಗಿರಲಿದ್ದು, ಜಮ್ಮು-ಕಾಶ್ಮೀರ ಹಾಗೂ ಲಡಾಕ್​ ನೂತನ ಕೇಂದ್ರಾಡಳಿತ ಪ್ರದೇಶಗಳಾಗಲಿವೆ.

Last Updated : Aug 8, 2019, 11:48 PM IST

ABOUT THE AUTHOR

...view details