ಜಾರ್ಖಂಡ್ :ಮತದಾನ ಮಾಡದೇ ದೇಶದ ಬಗ್ಗೆ ಬಿಟ್ಟಿ ಭಾಷಣ ಮಾಡೋರಿಗೇನೂ ಕೊರತೆಯಿಲ್ಲ. ಆದರೆ, ಇಲ್ಲೊಬ್ಬ ವೃದ್ಧೆ ತನ್ನ ಜೀವವನ್ನೇ ಪಣಕ್ಕಿಟ್ಟು ಮತದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. 59ರ ವೃದ್ಧೆಗೆ ಶ್ವಾಸಕೋಶದ ತೊಂದರೆ ಇದ್ದರೂ ಬರೋಬ್ಬರಿ 330 ಕಿಲೋಮೀಟರ್ ಕ್ರಮಿಸಿ ಬಂದು ತನ್ನ ಮತದಾನದ ಹಕ್ಕನ್ನು ಚಲಾಯಿಸಿ ಮಾದರಿಯಾಗಿದ್ದಾಳೆ.
ಈ ವೃದ್ಧೆಯ ಹೆಸರು ರೇಣು ಮಿಶ್ರಾ. ಈಕೆ ಜಾರ್ಖಂಡ್‌ನ ಧುಂಕಾ ಪ್ರದೇಶದ ಇದೇ ಮಹಿಳೇ ಮೇ 19ರಂದು ನಡೆದ ಲೋಕಸಭಾ ಚುನಾಣೆಯ ಏಳನೇ ಹಂತದ ಮತದಾನದ ವೇಳೆ, ಪಶ್ಚಿಮಬಂಗಾಳದ ಕೋಲ್ಕತಾದಿಂದ ಜಾರ್ಖಂಡ್‌ನ ಧುಂಕಾದ ಬೂತ್ ಸಂಖ್ಯೆ 43 ಕ್ಕೆ ಬಂದು ತನ್ನ ಹಕ್ಕು ಚಲಾಯಿಸಿದ್ದಾಳೆ.
ರೇಣು ಮಿಶ್ರಾ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದಾರೆ. ಇದರ ಮಧ್ಯೆಯೂ ಕೃತಕ ಆಕ್ಸಿಜನ್ ನೆರವಿನಿಂದ 330 ಕಿ.ಮೀ ಸಂಚರಿಸಿದ್ದಾಳೆ. ತನ್ನ ಜೀವದ ಹಂಗು ತೊರೆದು ಮತದಾನದ ಹಕ್ಕು ಚಲಾಯಿಸಿದ್ದಾಳೆ. ಮದತಾನದ ಬಳಿಕ ಮಾತನಾಡಿದ್ದ ರೇಣು ಮಿಶ್ರಾ, ನಾನು ಎಲ್ಲಿಯವರೆಗೂ ಬದುಕಿರುತ್ತೇನೋ ಅಲ್ಲಿಯವರೆಗೂ ದೇಶ ಕಟ್ಟಲು ನನ್ನ ಹಕ್ಕನ್ನು ಚಲಾಯಿಸುತ್ತೇನೆ ಎಂದಿದ್ದಾರೆ.
ಜನವರಿ 23 ರಂದು ಮಿಶ್ರಾ ಅನಾರೋಗ್ಯದ ಕಾರಣದಿಂದ ವರ್ಲ್ಡ್ ಹೆಲ್ತ್ ಹಾಸ್ಪಿಟಲ್ಗೆ ದಾಖಲಾಗಿದ್ದರು. ಮೇ 19ರಂದು ಮತದಾನಕ್ಕಾಗಿ ಬರುವಾಗ ತನಗೆ ಬೇಕಾದ ವ್ಯವಸ್ಥೆಗಳನ್ನೂ ಮಾಡಬೇಕೆಂದು ಮನವಿ ಮಾಡಿದ್ದರು. ರೇಣು ಮಿಶ್ರಾ ಅವರ ಮನವಿ ಮೇರೆಗೆ ದುಂಕಾದ ಡೆಪ್ಯುಟಿ ಕಮೀಷನರ್ ಮುಖೇಶ್‌ಕುಮಾರ್ ಆಕೆ ಪ್ರಯಾಣಕ್ಕೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿದ್ದರು. ಜತೆಗೆ ಬೇಕಾದ ಎಲ್ಲಾ ಮೆಡಿಕಲ್ ಸೌಲಭ್ಯಗಳನ್ನೂ ಒದಗಿಸಿದ್ದರು. ಜೀವದ ಹಂಗು ತೊರೆದು ಮತದಾನ ಮಾಡಿದ ರೇಣು ಮಿಶ್ರಾ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದಾರೆ. ರೇಣು ಮಿಶ್ರಾರ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.