ನವದೆಹಲಿ: ಅಸ್ಸೋಂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿಚಾರ ಭಾರಿ ವಿವಾದಕ್ಕೆ ಗ್ರಾಸವಾಗಿದ್ದು, ಭಾರತೀಯ ನಾಗರಿಕರು ಎಂದೆನಿಸಿಕೊಳ್ಳುವ ನೋಂದಣಿ ಪ್ರಕ್ರಿಯೆ ಜನರನ್ನು ಮಾನಸಿಕ ಹಿಂಸೆಗೆ ಗುರಿಮಾಡುತ್ತಿದೆ ಎಂಬುದು ಸಮೀಕ್ಷಾ ವರದಿಯೊಂದು ತಿಳಿಸಿದೆ.
ಮಾನವ ಹಕ್ಕುಗಳಿಗೆ ಸಂಬಂಧಿಸಿದ ಹಿಂಸೆ ವಿರುದ್ಧದ ರಾಷ್ಟ್ರೀಯ ಆಂದೋಲನ (ಎನ್ಸಿಟಿಎ) ಈ ಸಮೀಕ್ಷೆ ನಡೆಸಿದ್ದು 41 ಲಕ್ಷ ಅಸ್ಸೊಂ ಜನರಲ್ಲಿ ಶೇ 89ರಷ್ಟು ಅಥವಾ 37 ಲಕ್ಷ ಜನರು ಎನ್ಆರ್ಸಿ ಕರಡು ಪ್ರಕ್ರಿಯೆಯು ಮಾನಸಿಕ ಹಿಂಸೆಯಂತಿದೆ ಎಂದು ದೂರಿದ್ದಾರೆ.