ನವದೆಹಲಿ:ಜಮ್ಮುಕಾಶ್ಮೀರ ಮತ್ತು ಅಲ್ಲಿನ ಜನರ ಅಭಿವೃದ್ಧಿಗೆ ಸಂಬಂಧಿಸಿದಂತಹ ಸರ್ಕಾರದ ಉಪಕ್ರಮಗಳು ಮತ್ತು ನೀತಿಗಳನ್ನು ಹರಡುವ ಸಲುವಾಗಿ 36 ಜನ ಕೇಂದ್ರದ ಸಚಿವರುಗಳು ಇದೇ ಜನವರಿ 18 ರಿಂದ 25 ರವರೆಗೆ ಜಮ್ಮಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
ಗೃಹ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಈ ಕೆಳಗಿನ ಪಟ್ಟಿಯಲ್ಲಿರುವ 36 ಕೇಂದ್ರ ಸಚಿವರು ಜನವರಿ 18 ರಿಂದ 24 ರವರೆಗೆ ಜಮ್ಮುವಿನಲ್ಲಿ 51 ಮತ್ತು ಕಾಶ್ಮೀರದ 8 ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮ-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಆರು ತಿಂಗಳುಗಳ ನಂತರ ಜಮ್ಮುಕಾಶ್ಮೀರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳನ್ನು ಹಂಚಿಕೊಳ್ಳುವುದು ಮತ್ತು ಜಮ್ಮುಕಾಶ್ಮೀರದ ಜನರೊಂದಿಗೆ ಬೆರೆತು, ಅಲ್ಲಿಗೆ ರೂಪಿಸಿರುವ ಹೊಸ ಯೋಜನೆಗಳು ಮತ್ತು ಇತರ ನೀತಿಗಳ ಬಗ್ಗೆ ಅವರಿಗೆ ಅರಿವು ಮೂಡಿಸುವ ಕಾರ್ಯವನ್ನು ಸಚಿವರುಗಳಿಗೆ ನೀಡಲಾಗಿದೆ ಎಂದು ಹಿರಿಯ ಕೇಂದ್ರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.