ಹೈದರಾಬಾದ್:ನೀವು ಈಗಾಗಲೇ ಸ್ಕ್ರೀನ್ ಸ್ಲೋಚಿಂಗ್ ಬಲಿಯಾಗಿದ್ದರೆ, ನಿಮ್ಮ ಬೆನ್ನಿಗೆ ಮತ್ತು ದೇಹದ ಭಾಗಗಳಿಗೆ ಯಾವುದೇ ಹಾನಿಯಾಗದಂತೆ ಕಾಪಾಡಿಕೊಳ್ಳಲು ಇನ್ನೂ ತಡವಾಗಿಲ್ಲ. ಇದಕ್ಕೆ ಸರಳ ಹಾಗೂ ಉತ್ತಮ ಪರಿಹಾರಗಳಿವೆ ಎಂದು ಎಸಿಇ-ಸಿಪಿಟಿ ಪ್ರಮಾಣೀಕೃತ ಫಿಟ್‌ನೆಸ್ ತರಬೇತುದಾರ ಮೊಹಮ್ಮದ್ ಜುನೈದ್ ಅಖ್ತರ್ ಹೇಳುತ್ತಾರೆ.
ಲಾಕ್ಡೌನ್ ಹಿನ್ನೆಲೆ ಹೆಚ್ಚಿನ ಮಂದಿ ಮನೆಯಲ್ಲೇ ಕುಳಿತು ಲ್ಯಾಪ್‌ಟಾಪ್‌ನ ಮುಂದೆ ಕೆಲಸ ಮಾಡುವುದರಿಂದ ಬೆನ್ನು ಅಥವಾ ಕುತ್ತಿಗೆ ನೋವುಗಳನ್ನನುಭವಿಸುವ ಸಾಧ್ಯತೆ ಹೆಚ್ಚು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಬೇರೆಯವರ ಸಹಾಯವಿಲ್ಲದೆ ದೈಹಿಕ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾದ ಕೆಲ ಮಾರ್ಗಗಳಿವೆ. ಅದರಲ್ಲಿ ಕೆಲವು ಇಂತಿವೆ.
ಕೆಲಸದ ವೇಳೆ ಪ್ರತೀ 45 ನಿಮಿಷಗಳಿಗೊಮ್ಮೆ ಕುಳಿತ ಸ್ಥಳದಿಂದ ಎದ್ದು ಕೋಣೆಯೊಳಗೆ ಆದರೂ ಸರಿ ಕೊಂಚ ಓಡಾಡಬೇಕು.
ಸ್ಟ್ರೆಚ್(ಹಿಗ್ಗಿಸುವಿಕೆ):
ದೀರ್ಘಕಾಲ ಕುಳಿತುಕೊಳ್ಳುವಾಗ ನಿಮ್ಮ ಭಂಗಿಯ ಬಗ್ಗೆ ಜಾಗೃತರಾಗಿರಲು ದೇಹದ ಭಾಗಗಳನ್ನು ಅದರಲ್ಲೂ ಬೆನ್ನು ಮೂಳೆ, ಕೀಲು ಸ್ಟ್ರೆಚ್ ಮಾಡುವುದು ಅತ್ಯಗತ್ಯ.
ಪೆಕ್ಟೋರಲ್ ಸ್ಟ್ರೆಚ್:
ನಿಮ್ಮ ಕಂಪ್ಯೂಟರ್ ಪರದೆ ಅಥವಾ ಲ್ಯಾಪ್‌ಟಾಪ್‌ನಿಂದ ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ವಿರಾಮದ ಭಾಗವಾಗಿ, ನಿಮ್ಮ ಕೈಗಳನ್ನು ನಿಮ್ಮ ಬೆನ್ನಿನ ಹಿಂದೆ ಇಂಟರ್‌ಲಾಕ್ ಮಾಡಿ, ಭುಜವನ್ನು ನಿಧಾನವಾಗಿ ಹಿಸುಕಿ. ಈ ಸ್ಟ್ರೆಚ್ ಅನ್ನು ಹೆಚ್ಚಾಗಿ ಪುನರಾವರ್ತಿಸುವಾಗ, ಇದು ನಿಮ್ಮ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ.
ಟ್ರೆಪೆಜಿಯಸ್ ಕುತ್ತಿಗೆ ಸ್ಟ್ರೆಚ್:
ಟ್ರೆಪೆಜಿಯಸ್ ಕುತ್ತಿಗೆ ಸ್ಟ್ರೆಚ್: ನಿಮ್ಮ ಕುರ್ಚಿಯ ಕೆಳಭಾಗವನ್ನು ನಿಮ್ಮ ಎಡಗೈಯಿಂದ ಹಿಡಿದುಕೊಂಡು ನಿಮ್ಮ ಬಲಗೈಯನ್ನು ಎಡ ಕಿವಿಗೆ ತಂದು ನಿಮ್ಮ ತಲೆಯನ್ನು ನಿಧಾನವಾಗಿ ಬಲ ಭುಜದ ಕಡೆಗೆ ತಳ್ಳಿರಿ. ನಿಮ್ಮ ಬಲ ಕಿವಿಯನ್ನು ಭುಜದ ಹತ್ತಿರ ತರಲು ಪ್ರಯತ್ನಿಸಿ. ಅದನ್ನು ಇನ್ನೊಂದು ಬದಿಯಲ್ಲಿ ಪುನರಾವರ್ತಿಸಿ.
ಗ್ಲೂಟ್ ಸ್ಟ್ರೆಚ್:
ನಿಮ್ಮ ಬಲಗಾಲನ್ನು ನಿಮ್ಮ ಎಡ ತೊಡೆಯ ಮೇಲಿರಿಸಿ. ನಿಮ್ಮ ಕೈಗಳನ್ನು ಮಂಡಿಯ ಮೇಲಿಟ್ಟು ಬೆನ್ನು ನೇರವಾಗಿರಿಸಿ ನಿಧಾನವಾಗಿ ಮುಂದಕ್ಕೆ ಬಾಗಬೇಕು. ಹಾಗೆ ಹಿಂದಕ್ಕೆ ನಿಧಾನವಾಗಿ ಮರಳಿ ಬಾಗಬೇಕು. ಇದನ್ನು ಕೆಲ ಬಾರಿ ಮಾಡಿದಾಗ ದೇಹಕ್ಕೆ ಹಾಯೆನಿಸುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ನೀವು ಮನೆಯಿಂದ ಕೆಲಸ ಮಾಡುತ್ತಿದ್ದರೆ, ಯಾವುದೇ ಭಾಗಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆತಪ್ಪದೇ ಈ ಕ್ರಮಗಳನ್ನು ಅನುಸರಿಸಿ..