ಮಚಿಲಿಪಟ್ನಂ (ಆಂಧ್ರ ಪ್ರದೇಶ): ಚೆನ್ನೈಗೆ ಸಾಗಣೆ ಮಾಡಲಾಗುತ್ತಿದ್ದ ಸುಮಾರು 280 ಕೆಜಿ ಗಾಂಜಾವನ್ನು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಮೀನು ಸಾಗಿಸುವ ವಾಹನದಲ್ಲಿ 30 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಸಾಗಣೆ: ವಶಕ್ಕೆ ಪಡೆದ ಪೊಲೀಸರು - 30 ಲಕ್ಷ ರೂಪಾಯಿ ಮೌಲ್ಯದ 280 ಕೆಜಿ ಗಾಂಜಾ ವಶಕ್ಕೆ
ಆಂಧ್ರ ಪ್ರದೇಶ ಪೊಲೀಸರು 30 ಲಕ್ಷ ರೂಪಾಯಿ ಮೌಲ್ಯದ 280 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಗಾಂಜಾವನ್ನು ಚೆನ್ನೈಗೆ ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
ganja
ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಚಿಲಿಪಟ್ನಂ-ವಿಜಯವಾಡ ಬೈಪಾಸ್ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಮೀನು ಸಾಗಿಸುತ್ತಿದ್ದ ವಾಹನದಲ್ಲಿ 20 ಚೀಲಗಳಲ್ಲಿ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ.
ವಾಹನದ ಮಾಲೀಕರು ಸ್ಥಳದಿಂದ ಪರಾರಿಯಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.