ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಕೊರೊನಾ: 24 ಗಂಟೆಯಲ್ಲಿ 2,293 ಕೇಸ್​, 71 ಸಾವು, 37 ಸಾವಿರ ಸೋಂಕಿತರು

ಡೆಡ್ಲಿ ವೈರಸ್​ ಹರಡುತ್ತಿರುವ ವೇಗ ಮತ್ತಷ್ಟು ರಭಸಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2 ಸಾವಿರಕ್ಕೂ ಅಧಿಕ ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

COVID-19
COVID-19

By

Published : May 2, 2020, 10:00 AM IST

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ 2 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಕಳೆದ 24 ಗಂಟೆಯಲ್ಲಿ ಕಾಣಿಸಿಕೊಂಡಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕೇಂದ್ರ ಆರೋಗ್ಯ ಇಲಾಖೆ ರಿಲೀಸ್ ಮಾಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 2,293 ಹೊಸ ಪ್ರಕರಣ, 71 ಸಾವು ಕಾಣಿಸಿಕೊಂಡಿವೆ. ಹೀಗಾಗಿ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 37,336 ಪ್ರಕರಣಗಳಿದ್ದು, ಇದರಲ್ಲಿ 9,950 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿರುವ ಕಾರಣ ಸದ್ಯ 26,167 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹಾಗೂ 1218 ಜನರು ಸಾವನ್ನಪ್ಪಿದ್ದಾರೆ.

ಒಂದೇ ದಿನ ಮಹಾರಾಷ್ಟ್ರದಲ್ಲಿ 1,008 ಹೊಸ ಪ್ರಕರಣ ಕಂಡು ಬಂದಿದ್ದು, ಪಟ್ಟು ಸೋಂಕಿತರ ಸಂಖ್ಯೆ11,506 ಕೇಸ್​ಗಳಿವೆ. ಉಳಿದಂತೆ ಗುಜರಾತ್​​ನಲ್ಲಿ 326 ಹೊಸ ಪ್ರಕರಣ ಕಂಡು ಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 4,721 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ರಾಜಸ್ಥಾನದಲ್ಲಿ 2,666 ಪ್ರಕರಣಗಳ ಪೈಕಿ 1,116 ಜನರು ಗುಣಮುಖರಾಗಿದ್ದರೆ, ತಮಿಳುನಾಡಿನಲ್ಲಿ 2,526 ಸೋಂಕಿತರ ಪೈಕಿ 1,312 ಸೋಂಕಿತರು ಡಿಸ್ಚಾರ್ಜ್​​ ಆಗಿದ್ದು, ಉತ್ತರಪ್ರದೇಶದಲ್ಲಿ 2,328 ಪ್ರಕರಣಗಳ ಪೈಕಿ 654 ಜನರು ಗುಣಮುಖರಾಗಿದ್ದಾರೆ. ಇನ್ನು ಕರ್ನಾಟಕದಲ್ಲೂ 589 ಸೋಂಕಿತರಲ್ಲಿ 251 ಜನರು ಗುಣಮುಖರಾಗಿದ್ದು, 22 ಜನರು ಸಾವನ್ನಪ್ಪಿದ್ದಾರೆ.

ಸಿಆರ್​ಪಿಎಫ್​ ಯೋಧರಿಗೆ ಕೋವಿಡ್​:

ಕೇಂದ್ರ ಮೀಸಲು ಪಡೆಯ (ಸಿಆರ್​​​ಪಿಎಫ್)​​ನ 127 ಯೋಧರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಹಿಂದೆ 64 ಯೋಧರಲ್ಲಿ ಕಾಣಿಸಿಕೊಂಡಿದ್ದ ಡೆಡ್ಲಿ ವೈರಸ್​​ ಇದೀಗ ಮತ್ತೆ 68 ಯೋಧರಿಗೆ ತಲುಗಿದೆ ಎಂದು ಸಿಆರ್​ಪಿಎಫ್​ ಅಧಿಕೃತ ಹೇಳಿಕೆ ನೀಡಿದೆ.

ABOUT THE AUTHOR

...view details