ಕರ್ನಾಟಕ

karnataka

ETV Bharat / bharat

ಈದ್‌ಗೆ ಭದ್ರತೆ ಸಡಿಲಿಕೆ: ಶ್ರೀನಗರದಲ್ಲಿ 18 ಸಾವಿರ ಮುಸ್ಲೀಮರಿಂದ ಪ್ರಾರ್ಥನೆ - 18,000 ಸಾವಿರ ಜನರಿಂದ ಪ್ರಾರ್ಥನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಈದ್ ಆಚರಣೆಯ ಅಂಗವಾಗಿ ಭದ್ರತೆ ಸಡಿಲಿಸಲಾಗಿದ್ದು ನಿನ್ನೆ(ಶುಕ್ರವಾರ) ಶ್ರೀನಗರದಲ್ಲಿ 18 ಸಾವಿರ ಜನ ನಮಾಜ್ ಮಾಡಿದ್ದಾರೆ.

18 ಸಾವಿರ ಮುಸ್ಲಿಮರಿಂದ ಪ್ರಾರ್ಥನೆ ಸಲ್ಲಿಕೆ

By

Published : Aug 10, 2019, 9:51 AM IST

Updated : Aug 10, 2019, 10:07 AM IST

ಶ್ರೀನಗರ: ಶುಕ್ರವಾರ ಮುಸ್ಲೀಮರ ಪ್ರಾರ್ಥನೆಗೆ ಅನುಕೂಲವಾಗಲೆಂದು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಿದ್ದ ಸೆಕ್ಷನ್ 144 (ನಿಷೇಧಾಜ್ಞೆ)ಯನ್ನು ಭಾಗಶಃ ತೆರವುಗೊಳಿಸಿದ ನಂತರ ಶ್ರೀನಗರದಲ್ಲಿ 18 ಸಾವಿರ ಮುಸ್ಲೀಮರು ನಮಾಜ್ ಸಲ್ಲಿಸಿದ್ರು.

18 ಸಾವಿರ ಮುಸ್ಲಿಮರಿಂದ ಪ್ರಾರ್ಥನೆ ಸಲ್ಲಿಕೆ

ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಘೋಷಣೆ ಮಾಡುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿತ್ತು.

ಈದ್ ಆಚರಣೆಯ ಅಂಗವಾಗಿ ಮುಸ್ಲೀಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಉದ್ದೇಶದಿಂದ ಭಾಗಶ: ನಿಷೇಧಾಜ್ಞೆ ತೆರವುಗೊಳಿಸಲಾಗಿದೆ ಎಂದು ಉಪಮ್ಯಾಜಿಸ್ಟ್ರೇಟ್ ಸುಷ್ಮಾ ಚೌಹಾನ್ ಆದೇಶಿಸಿದ್ದರು. ಹೀಗಾಗಿ ಸುಮಾರು 18 ಸಾವಿರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ್ರೆ, ಬುದ್ಗಾಮ್​ನಲ್ಲಿ 7,500, ಅನಂತ್​ನಾಗ್ ಜಿಲ್ಲೆಯಲ್ಲಿ 11 ಸಾವಿರ, ಬರಾಮುಲ್ಲ, ಕುಲ್ಗಾಮ್ ಮತ್ತು ಶೋಫಿಯಾನ್​ನಲ್ಲಿ 4 ಸಾವಿರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Aug 10, 2019, 10:07 AM IST

ABOUT THE AUTHOR

...view details