ಚೆನ್ನೈ(ತಮಿಳುನಾಡು): ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಈಗಾಗಲೇ ಹಲವು ರಾಜ್ಯಗಳಲ್ಲಿ ಮದ್ಯದಂಗಡಿಗಳು ಆರಂಭಗೊಂಡಿವೆ. ಅದರಂತೆ ಮೇ 7ರಿಂದ ತಮಿಳುನಾಡಿನಲ್ಲೂ ಮದ್ಯದಂಗಡಿಗಳು ತೆರೆಯುತ್ತಿದ್ದು, ಮದ್ಯಪ್ರಿಯರಿಗೆ ಸಿಹಿ ಸುದ್ದಿ ಜೊತೆ ಕಹಿ ಸುದ್ದಿಯನ್ನೂ ಕೊಟ್ಟಿದೆ.
ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಿಸಿರುವ ತಮಿಳುನಾಡು ಸರ್ಕಾರ ಬ್ರಾಂಡ್ಗಳ ಅಧಾರದ ಮೇಲೆ ಬೆಲೆ ಏರಿಸಲು ನಿರ್ಧರಿಸಿದೆ. ವಿದೇಶಿ ಮದ್ಯದ ಮೇಲೆ ಶೇ.15ರಷ್ಟು ಸುಂಕ ಹೆಚ್ಚಿಸಲಾಗಿದ್ದು, ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯದ ಬ್ರಾಂಡ್ಗಳ ಮೇಲೂ ಅಧಿಕ ಸುಂಕ ವಿಧಿಸಲಾಗಿದೆ.
ಸಾಮಾನ್ಯ ಬ್ರಾಂಡ್ಗಳ ಮೇಲೆ ಕ್ವಾರ್ಟರ್ಗೆ 10 ರೂಪಾಯಿ ಏರಿಕೆಯಾಗಿದ್ದರೆ, ಪ್ರೀಮಿಯಂ ಬ್ರಾಂಡ್ಗಳ ಮೇಲೆ 20 ರೂಪಾಯಿ ಹೆಚ್ಚಳ ಮಾಡಲಾಗಿದೆ. ತಮಿಳನಾಡಿನಲ್ಲಿ ಮದ್ಯದ ಅಂಗಡಿಗಳು ಆದಾಯದ ಪ್ರಮುಖ ಮೂಲವಾಗಿದ್ದು, ಬೆಲೆ ಏರಿಕೆ ಮೂಲಕ ಮತ್ತಷ್ಟು ಆದಾಯಗಳಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.