ಕರ್ನಾಟಕ

karnataka

ETV Bharat / bharat

ಆಕ್ಸಿಜನ್​ ಸೋರಿಕೆ: ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್‌ ಬೆಂಕಿಗಾಹುತಿ... ವಿಡಿಯೋ - Chengalpattu Hospital news

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್‌ ಒಂದರಲ್ಲಿ ಆಮ್ಲಜನಕ ಸೋರಿಕೆಯಾದ ಪರಿಣಾಮ ಸಿಲಿಂಡರ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಆ್ಯಂಬುಲೆನ್ಸ್​​ ಬೆಂಕಿಗಾಹುತಿಯಾಗಿದೆ.

108 ambulances at Chengalpattu Hospital were completely devastated by the fire.
ಆ್ಯಂಬುಲೆನ್ಸ್‌ ಬೆಂಕಿಗಾಹುತಿ

By

Published : Sep 6, 2020, 7:42 PM IST

ತಮಿಳುನಾಡು:ಆಸ್ಪತ್ರೆಯ ಆ್ಯಂಬುಲೆನ್ಸ್​​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆಂಗಲ್ಪಟ್ಟು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 30 ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತವೆ. ಇಂದು ಆ್ಯಂಬುಲೆನ್ಸ್ ಒಂದರಲ್ಲಿ ಆಕ್ಸಿಜನ್​ ಸೋರಿಕೆಯಾಗಿದೆ ಮತ್ತು ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯನ್ನು ಪರೀಕ್ಷಿಸಲು ವಾಹನ ತುರ್ತು ವಿಭಾಗದ ಬಳಿ ಬಂದಾಗ ಸಿಲಿಂಡರ್​​ನಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಆ್ಯಂಬುಲೆನ್ಸ್‌ ಬೆಂಕಿಗಾಹುತಿ

ಪರಿಣಾಮ ಸ್ವಲ್ಪ ಸಮಯದ ನಂತರ ಇಡೀ ಆಂಬ್ಯುಲೆನ್ಸ್‌ಗೆ ಬೆಂಕಿ ಕಾಣಿಸಿಕೊಂಡಿದ್ದರಿಂದ ವಾಹನ ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅದೃಷ್ಟವಶಾತ್ ಆ್ಯಂಬುಲೆನ್ಸ್ ಒಳಗೆ ಇದ್ದ ವೃದ್ಧೆ, ಚಾಲಕ ಸೆಲ್ವಕುಮಾರ್ ಮತ್ತು ಸಹಾಯಕಿ ಅಂಬಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದ ತಕ್ಷಣ ಘಟನಾ ಸ್ಥಳಕ್ಕೆ ಚೆಂಗಲ್ಪಟ್ಟು ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ಘಟನೆಯಿಂದಾಗಿ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಆತಂಕದ ನಿರ್ಮಾಣವಾಗಿತ್ತು. ಘಟನೆ ಹಿನ್ನೆಲೆ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ತಮಿಳುನಾಡಿನಲ್ಲಿರುವ 1,300 ಆ್ಯಂಬುಲೆನ್ಸ್​​ ವಾಹನಗಳ ಸುರಕ್ಷತೆಯನ್ನು ಪರಿಶೀಲಿಸಲು ಆದೇಶಿಸಿದ್ದಾರೆ.

ABOUT THE AUTHOR

...view details